ಸಂಸ್ಕೃತ ಸಂಶೋಧನಾ ಅಧ್ಯಯನ ಕ್ಷೇತ್ರದಲ್ಲಿ ನೂತನ ಪ್ರವೃತ್ತಿಗಳು - ಇಂದಿನಿಂದ ಕಟೀಲಿನಲ್ಲಿ ರಾಷ್ಟ್ರಮಟ್ಟದ ವಿಚಾರಗೋಷ್ಟಿ
Update: 2016-01-29 23:33 IST
ಕಟೀಲು : ಇಲ್ಲಿನ ದೇಗುಲದ ಶ್ರೀ ದುರ್ಗಾ ಸಂಸ್ಕೃತ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರದಲ್ಲಿ ಸಿರಸಿಯ ಸಂಸ್ಕೃತ ಶೋಧ ಸಂಸ್ಥಾನದ ಸಹಯೋಗದಲ್ಲಿ ಸಂಸ್ಕೃತ ಸಂಶೋಧನಾ ಅಧ್ಯಯನ ಕ್ಷೇತ್ರದಲ್ಲಿ ನೂತನ ಪ್ರವೃತ್ತಿಗಳು ವಿಚಾರದಲ್ಲಿ ತಾ. 30 ಹಾಗೂ 31ರಂದು ರಾಷ್ಟ್ರಮಟ್ಟದ ವಿಚಾರಗೋಷ್ಟಿ ನಡೆಯಲಿದೆ. ನಳಿನ್ ಕುಮಾರ್, ಎಚ್. ಆರ್. ಸತೀಶ್ಚಂದ್ರನ್, ಜಿ.ಎನ್. ಭಟ್, ಅಭಯಚಂದ್ರ, ಉಮಾಕಾಂತ ಭಟ್, ಸೂರ್ಯನಾರಾಯಣ ಭಟ್ ಹಿತ್ಲಳ್ಳಿ, ಡಾ. ಶುಶ್ರುತ, ಡಾ. ಮೈಕಲ್, ಮುಂತಾದ ಅನೇಕ ವಿದ್ವಾಂಸರು ಎರಡು ದಿನಗಳ ಕಾಲ ವಿಚಾರಗೋಷ್ಟಿಯಲ್ಲಿ ಭಾಗವಹಿಸಲಿದ್ದಾರೆ. ಶನಿವಾರ ಸಂಜೆ ಮೂಡಂಬೈಲು, ಉಮಾಕಾಂತ ಭಟ್, ಶ್ರೀಹರಿ ಆಸ್ರಣ್ಣ, ದೇವಿಪ್ರಸಾದ ಆಳ್ವ ಮತ್ತಿತರರ ಉಪಸ್ಥಿತಿಯಲ್ಲಿ ತಾಳಮದ್ದಲೆ ಕರ್ಮಬಂಧ ನಡೆಯಲಿದೆ ಎಂದು ಡಾ. ಪದ್ಮನಾಭ ಮರಾಠೆ ತಿಳಿಸಿದ್ದಾರೆ.