ಭಾರತ-ಪಾಕಿಸ್ತಾನಗಳ ನಡುವೆ ರೈಲು ಸಂಪರ್ಕ ಒಪ್ಪಂದ ವಿಸ್ತರಣೆ
Update: 2016-01-29 23:57 IST
ಹೊಸದಿಲ್ಲಿ, ಜ.29: ಭಾರತ ಹಾಗೂ ಪಾಕಿಸ್ತಾನಗಳು ರೈಲು ಸಂಪರ್ಕ ಒಪ್ಪಂದವನ್ನು ಮುಂದಿನ ಮೂರು ವರ್ಷಗಳಿಗೆ ವಿಸ್ತರಿಸಿದೆ. ರಾಜತಾಂತ್ರಿಕ ಮಾರ್ಗದ ಮೂಲಕ ಪರಸ್ಪರ ಸಮ್ಮತಿಯಿಂದ ಈ ವಿಸ್ತರಣೆ ನಡೆದಿದೆ.
ಒಪ್ಪಂದವನ್ನು 2016ರ ಜ.19ರಿಂದ 2019ರ ಜ.18ರವರೆಗೆ ವಿಸ್ತರಿಸಲಾಗಿದೆಯೆಂದು ವಿದೇಶಾಂಗ ವ್ಯವಹಾರ ಸಚಿವಾಲಯದ ಹೇಳಿಕೆಯೊಂದು ಇಂದಿಲ್ಲಿ ತಿಳಿಸಿದೆ.
1976ರ ಜೂ. 28ರಂದು ಸಹಿ ಹಾಕಲಾಗಿದ್ದ ಈ ಒಪ್ಪಂದ, ಭಾರತ-ಪಾಕಿಸ್ತಾನಗಳ ನಡುವೆ ಪ್ರಯಾಣಿಕ ಹಾಗೂ ಸರಕು ಸಾಗಾಟ ರೈಲು ಸಂಪರ್ಕಕ್ಕೆ ಅನುವು ಮಾಡಿಕೊಟ್ಟಿದೆ.
ಪ್ರಸ್ತುತ, ಅತ್ತಾರಿ ವಾಘ್ ಗಡಿಯ ಮೂಲಕ ದಿಲ್ಲಿಯಿಂದ ಲಾಹೋರ್‌ಗೆ ಸರಕು ಸಾಗಣೆ ಹಾಗೂ ಪ್ರಯಾಣಿಕ ರೈಲು ಸಂಪರ್ ಹಾಗೂ ಮುನಬಾವೊ ಖೋಕ್ರಪಾರದ ಮೂಲಕ ಜೋಧ್‌ಪುರದಿಂದ ಕರಾಚಿಗೆ ಪ್ರಯಾಣಿಕ ರೈಲು ಸಂಪರ್ಕವಿದೆ.