×
Ad

ಕರ್ಣಾಟಕ ಬ್ಯಾಂಕ್‌ನ 707ನೆ ಶಾಖೆ ಉದ್ಘಾಟನೆ

Update: 2016-01-30 00:22 IST

ಕರ್ಣಾಟಕ ಬ್ಯಾಂಕ್‌ನ 707ನೆ ಶಾಖೆಯನ್ನು ತಮಿಳುನಾಡಿನ ತಿರುವಲ್ಲೂರಿನಲ್ಲಿ ಶುಕ್ರವಾರ ಚೆನ್ನೈಯ ‘ಸೆಲ್ವಂ ಮತ್ತು ಸುಕು’ ಕಂಪೆನಿಯ ಲೆಕ್ಕಪರಿಶೋಧಕ ಇ. ಪನ್ನೀರ್‌ಸೆಲ್ವಂ ಉದ್ಘಾಟಿಸಿದರು. ತಿರುವಲ್ಲೂರಿನ ರೋಟರಿ ಕ್ಲಬ್‌ನ ಅಧ್ಯಕ್ಷ ಇ. ಸುಬ್ರಮಣಿಯನ್ ಬ್ಯಾಂಕ್‌ನ ಎಟಿಎಂ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಮಹಬಲೇಶ್ವರ ಎಂ.ಎಸ್. ವಹಿಸಿದ್ದರು. ಬ್ಯಾಂಕ್‌ನ ನಿರ್ದೇಶಕ ಟಿ.ಆರ್. ಚಂದ್ರಶೇಖರನ್ ಉಪಸ್ಥಿತರಿದ್ದರು. ಬ್ಯಾಂಕ್‌ನ ಚೆನ್ನೈ ವಲಯ ಸಹಾಯಕ ವ್ಯವಸ್ಥಾಪಕ ಜಯನಾಗರಾಜ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ವೆಂಕಟಸುಬ್ರಮಣಿ ವಿ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News