×
Ad

ಕಾಸರಗೋಡು: ಮತಯಂತ್ರಗಳ ಪರಿಶೀಲನೆ

Update: 2016-01-30 00:22 IST

ಕಾಸರಗೋಡು, ಜ.29: ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲೆಯಲ್ಲಿ ಮತಯಂತ್ರಗಳ ಪ್ರಥಮ ಹಂತಗಳ ಪರಿಶೀಲನೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
 1,052 ಕಂಟ್ರೋಲ್ ಯೂನಿಟ್ ಮತ್ತು 908 ಬಾಲೆಟ್ ಯೂನಿಟ್‌ಗಳನ್ನು ಮೊದಲ ಹಂತ ದಲ್ಲಿ ತಪಾಸಣೆ ನಡೆಸಲಾಯಿತು.
ಚುನಾವಣಾ ಉಸ್ತುವಾರಿ ಹೊಂದಿರುವ ಉಪಜಿಲ್ಲಾಧಿಕಾರಿ ಡಾ.ಎಂ.ಸಿ.ರೆಜಿಲ್, ಇ.ಸಿ.ಐ. ಎಲ್. ಎಂಜಿನಿಯರ್ ಟಿ.ರಂಗಸ್ವಾಮಿ, ಎ.ನಾರಾಯಣ ನೇತೃತ್ವದಲ್ಲಿ ತಪಾಸಣೆ ನಡೆಯುತ್ತಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಜ್ಜುಗೊಳಿಸಿರುವ ಭದ್ರತಾ ಕೊಠಡಿಯಲ್ಲಿ ತಪಾಸಣೆ ನಡೆಸಲಾ ಗಿದೆ. ಸೂಕ್ಷ್ಮ ತಪಾಸಣೆಯ ಬಳಿಕ ಯಂತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಭದ್ರತಾ ಕೊಠಡಿಯಲ್ಲಿರಿಸಲಾಯತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News