ಮುಡಿಪು: ಸೂರಜ್ ಉತ್ಸವ ಉದ್ಘಾಟನೆ
ಕೊಣಾಜೆ, ಜ.29: ಮಕ್ಕಳು ಪ್ರಕಾಶಿಸಿ ದಲ್ಲಿ ಭವಿಷ್ಯದಲ್ಲಿ ಕುಟುಂಬಗಳು ಪ್ರಕಾಶಿಸುತ್ತವೆ. ಹೆತ್ತವರು ಅನಾವಶ್ಯಕ ಚರ್ಚೆಗಳನ್ನು ಬದಿಗಿರಿಸಿ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಉತ್ತಮ ಶಿಕ್ಷಣವನ್ನು ನೀಡಿದರೆ ಹೆತ್ತವರಿಗೆ ಮಾತ್ರವಲ್ಲ ಸಮಾಜಕ್ಕೂ ಆಸ್ತಿಯಾಗಲಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಸೂರಜ್ ಎಜುಕೇಶನಲ್ ಚಾರಿಟೇ ಬಲ್ ಟ್ರಸ್ಟ್, ಸೂರಜ್ ಇಂಟರ್ ನ್ಯಾಷನಲ್ ಹೈಯರ್ ಪ್ರೈಮರಿ ಶಾಲೆ, ಜ್ಞಾನದೀಪ ಹೈಸ್ಕೂಲ್ ಮತ್ತು ಸೂರಜ್ ಪಿ.ಯು. ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ‘ಸೂರಜ್ ಉತ್ಸವ-2016’ನ್ನು ಮುಡಿಪು ಶಾಲಾ ಮೈದಾನದಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಕರ್ಣಾಟಕ ಬ್ಯಾಂಕಿನ ಕಂಕನಾಡಿ ಬ್ರಾಂಚಿನ ಪ್ರಬಂಧಕಿ ರೇಣುಕಾ.ಎಂ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರು ವಾಚನಾಲಯ ಕಟ್ಟಡವನ್ನು ಉದ್ಘಾಟಿಸಿದರು.
ಮಮತಾ.ಡಿ.ಎಸ್.ಗಟ್ಟಿ,ಕರ್ಣಾಟಕ ಬ್ಯಾಂಕಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀನಿವಾಸ್ ದೇಶಪಾಂಡೆ, ಶಾಲೆಯ ಅಧ್ಯಕ್ಷ ಡಾ.ಮಂಜುನಾಥ ಯಸ್. ರೇವಣ್‌ಕರ್, ಹೈದರ್ ಪರ್ತಿಪ್ಪಾಡಿ, ಸೀತಾರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಸಂಚಾಲಕಿ ಹೇಮಲತಾ ಎಸ್. ರೇವಣ್‌ಕರ್, ಶಾಲಾ ಪ್ರಬಂಧಕ ಹರೀಶ್ ಶೆಟ್ಟಿ, ಶಾಲಾ ವಿದ್ಯಾರ್ಥಿ ನಿತೇಶ್ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ರೇಖಾ ರಾಜ್ ಅತಿಥಿಗಳ ಪರಿಚಯ ಮಾಡಿದರು.