ಮುದುಕನಿಗೆ ಹೊಡೆದ ಎಸ್ಸೈಗೆ ಊರವರೇ ಹೊಡೆದರು!
ಪತ್ತನಂತಿಟ್ಟ:ಮದ್ಯಪಾನಿಗಳನ್ನು ಪತ್ತೆಹಚ್ಚಲಿಕ್ಕಾಗಿ ಊದಲು ಹೇಳಿದಾಗ ಮುದುಕ ಎಸ್ಸೈಯ ಮುಖಕ್ಕೆ ಊದಿದ್ದು ಆತನ ಉಗುಳು ಎಸ್ಸೈಯ ಮುಖಕ್ಕೆ ರಾಚಿತ್ತು. ಕುಪಿತಗೊಂಡ ಎಸ್ಸೈ ಊದಿದಾತನ ಮುಖಕ್ಕೆ ಹೊಡೆದರು. ಇದನ್ನುನೋಡುತ್ತ ನಿಂತಿದ್ದವರು ಎಸ್ಸೈಗೆ ಹೊಡೆದರು. ನಿನ್ನೆಸಂಜೆ ಪತ್ತನಂತಿಟ್ಟ ನಗರ ಮಾರ್ಕೆಟ್‌ನ ಆಟೊ ಸ್ಟ್ಯಾಂಡ್‌ನಲ್ಲಿ ಈ ಘಟನೆ ನಡೆದಿದೆ.
ಎಸ್ಸೈ ಮತ್ತು ಪೊಲೀಸರು ಚಿಲ್ಲರೆ ಮದ್ಯಮಾರಾಟಕೇಂದ್ರದಿಂದ ಹೊರಬರುತ್ತಿದ್ದ ವರ ತಪಾಸಣೆ ನಿಂತಿದ್ದರು. ಮದ್ಯಸೇವನೆ ಮಾಡಿದ್ದಾನೆಯೇ ಎಂದು ಅಲ್ಲಿಂದ ಬರುತ್ತಿದ್ದಾರೆಯೇ ಎಂದು ತಿಳಿಯಲಿಕ್ಕಾಗಿ ಯಂತ್ರವಿಲ್ಲದಿದ್ದರಿಂದ ತನ್ನ ಮುಖಕ್ಕೆ ಊದಿಸಿ ಎಸ್ಸೈ ಪರಿಶೀಲಿಸುತ್ತಿದ್ದರು. ಈ ಸಂದರ್ಭದಲ್ಲಿ ಆ ದಾರಿಯಾಗಿ ಬಂದ ಮುದುಕನಲ್ಲಿ ಎಸ್ಸೈ ಊದಲು ಹೇಳಿದ್ದರು.
ಹಲ್ಲಿಲ್ಲದ ಮುದುಕ ಊದಿದಾಗ ಮುಖಕ್ಕೆ ಉಗುಳು ಬಿದ್ದಿತ್ತು. ಇದರಿಂದ ಕೊಪಗೊಂಡ ಎಸ್ಸೈ ಮುದುಕನ ಕಪಾಲ ಮೋಕ್ಷ ನಡೆಸಿದಾಗ ಮದ್ಯಪಾನ ಮಾಡಿ ಬಂದವರು, ಮದ್ಯತಪಾಸಣೆಯಲ್ಲಿ ಸಿಕ್ಕಿಬಿದ್ದವರೆಲ್ಲರೂ ಸಿಕ್ಕ ಅವಕಾಶವನ್ನು ಬಳಸಿ ಎಸ್ಸೈ ಮೇಲೆ ಏರಿಹೊಗಿದ್ದಾರೆ. ಎಸ್ಸೈಗೆ ಹೊಡೆದದ್ದಕ್ಕಾಗಿ ದೂರು ದಾಖಲಿಸಲಾಗಿಲ್ಲ. ಆದುದರಿಂದ ಘಟನೆ ಅಲ್ಲಿಗೆ ಮುಗಿಯಿತೆಂದು ವರದಿಯಾಗಿದೆ