ಜ.31ರಿಂದ ಕುಂಡೂರು ಉರೂಸ್
Update: 2016-01-30 14:22 IST
ಉಳ್ಳಾಲ: ಕುಂಡೂರು ಜುಮಾ ಮಸೀದಿ ಮದಕ ಅಂಬ್ಲಮೊಗರುನಲ್ಲಿ ಅಂತ್ಯ ಮಿಶ್ರಮಗೊಂಡಿರುವ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ರಿಫಾಯಿ ಅಲ್-ಬುಖಾರಿಯವರ 17ನೇ ಉರೂಸ್ ಯಾನೆ ಝಿಯಾರತ್ ಮತ್ತು 8ದವಸಗಳ ಧಾರ್ಮಿಕ ಉಪನ್ಯಾಸ ಜನವರಿ31ರಿಂದ ಫೆಬ್ರವರಿ7ರ ತನಕ ಸುಪ್ರಸಿದ್ಧ ಸಾದಾತು ಮತ್ತು ಉಲಮಾ ಶಿರೋಮಣಿಗಳಿಂದ ದುಅ ಮತ್ತು ಧಾರ್ಮಿಕ ಉಪನ್ಯಾಸ ನಡೆಯಲಿದೆ.
ಜನವರಿ 31ರಂದು ದ.ಕ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಯ್ಯಿದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಕೆ.ಪಿ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್, ಜ್ಯೂನಿಯಾರ್ ಬಾಖವಿ ಪ್ರಸಿದ್ಧಿಯ ಅಬ್ದುಲ್ ಕರೀಂ ಫೈಝಿ ಕುಂತೂರು ಮುಂತಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.