ನಾವೂರು-ಅಗ್ರಹಾರ ಮುಹಿಯುದ್ದೀನ್ ಜುಮಾ ಮಸೀದಿಯ ಖಾಝಿ ಸ್ವೀಕಾರ
Update: 2016-01-30 14:47 IST
ವಿಟ್ಲ : ನಾವೂರು-ಅಗ್ರಹಾರ ಮುಹಿಯುದ್ದೀನ್ ಜುಮಾ ಮಸೀದಿಯ ಖಾಝಿ ಸ್ವೀಕಾರ ಸಮಾರಂಭವು ಶುಕ್ರವಾರ ಮಸೀದಿಯಲ್ಲಿ ನಡೆಯಿತು.
ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರನ್ನು ಮೊಹಲ್ಲಾ ಖಾಝಿ ಆಗಿ ಸ್ವೀಕರಿಸಲಾಯಿತು. ಮಸೀದಿ ಗೌರವಾಧ್ಯಕ್ಷ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಖಾಝಿ ಸ್ವೀಕಾರ ನೆರವೇರಿಸಿದರು. ಮಸೀದಿ ಅಧ್ಯಕ್ಷ ಯೂಸುಫ್ ಅಗ್ರಹಾರ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ನಾವೂರು ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಅಸ್ಗರ್ ಅಲಿ ಫೈಝಿ, ಮಸೀದಿ ಕಾರ್ಯದರ್ಶಿ ಎಂ.ಎ.ಕೆ. ಮುಹಮ್ಮದ್, ಮಾಜಿ ಅಧ್ಯಕ್ಷ ಅಹ್ಮದ್ ಬಾವಾ ಹಾಜಿ, ಸಂಶುಲ್ ಉಲಮಾ ಕ್ರಿಯಾ ಸಮಿತಿ ಅಧ್ಯಕ್ಷ ಲತೀಫ್, ಮೈಂದಾಳ ಬದ್ರಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ರಹೀಂ ಮೊದಲಾದವರು ಭಾಗವಹಿಸಿದ್ದರು.