ನೀರುಪಾಲಾದ ವಿದ್ಯಾರ್ಥಿಯ ಮನೆಗೆ ಖಾಝಿ ಭೇಟಿ
Update: 2016-01-30 14:48 IST
ವಿಟ್ಲ : ನೇತ್ರಾವತಿ ನದಿಗೆ ಸ್ನಾನಕ್ಕೆ ತೆರಳಿದ್ದ ವೇಳೆ ನೀರುಪಾಲಾದ ನಾವೂರು ಗ್ರಾಮದ ಮೈಂದಾಲ ನಿವಾಸಿ ಮುಹಮ್ಮದ್ ಎಂಬವರ ಪುತ್ರ, ಬಂಟ್ವಾಳ ಎಸ್‌ವಿಎಸ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಬ್ದುಲ್ ಮುನಾಫ್ (17) ಮನೆಗೆ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಶುಕ್ರವಾರ ಭೇಟಿ ನೀಡಿ ದುವಾ ನೆರವೇರಿಸಿದರು.
ಈ ಸಂದರ್ಭ ಅಗ್ರಹಾರ ಮಸೀದಿ ಅಧ್ಯಕ್ಷ ಯೂಸುಫ್ ಅಗ್ರಹಾರ, ಮೈಂದಾಳ ಬದ್ರಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ರಹೀಂ, ಮಸೀದಿ ಇಮಾಂ ಆದಂ ಮದನಿ, ಪ್ರಮುಖರಾದ ಎನ್. ರಿಯಾರ್, ಮುಹಮ್ಮದ್ ಮುಸ್ತಫಾ, ಯೂಸುಫ್ ಮೊದಲಾದವರು ಉಪಸ್ಥಿತರಿದ್ದರು.