×
Ad

ಮೋದಿ ವಿರುದ್ಧ ಗುಡುಗಿದ ಶತ್ರುಘ್ನ ಸಿನ್ಹ

Update: 2016-01-30 14:55 IST

ಹೊಸದಿಲ್ಲಿ: ಬಿಜೆಪಿ ನಾಯಕ ಶತ್ರುಘ್ನ ಸಿನ್ಹ ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಪಾರಸು ಮಾಡಿರುವ ಕೇಂದ್ರ ಸರಕಾರದ ಕ್ರಮದ ಬಗ್ಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರನ್ನು ತಮ್ಮದೇ ಶೈಲಿಯಲ್ಲಿ ಟೀಕಿಸಿದ್ದಾರೆ. ಅವರು ನನಗೆ ಡೇಸಿಂಗ್ ಮತ್ತು ಡೈನಾಮಿಕ್ ಏಕ್ಷನ್ ಹೀರೋ ಪಿಎವ್ರಲ್ಲಿ ಸಂಪೂರ್ಣ ರವಸೆ ಇದೆ.ಆದರೆ ಯಾವ ಸಲಹೆಗಾರ ರಾಷ್ಟ್ರಪತಿ ಆಡಳಿತಕ್ಕೆ ಅವರಿಗೆ ಸಲಹೆ ಕೊಟ್ಟಿದ್ದಾನೆಂಬುದನ್ನು ಚಿಂತಿಸುವಾಗ ಆಶ್ಚರ್ಯವಾಗುತ್ತಿದೆ ಎಂದು ಹೇಳಿದ್ದಾರೆ. ಶತ್ರುಘ್ನ ಸಿನ್ಹ ಈ ಕುರಿತ ಕಾನೂನು ಮಜಲನ್ನು ಉಲ್ಲೇಖಿಸುತ್ತಾ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿತ್ತು ಹಾಗೂ ಐವರು ಸದಸ್ಯರ ಸಾಂವಿಧಾನಿಕ ಪೀಠ ಪರಿಶೀಲಿಸುತ್ತಿರುವಾಗ ಯಾಕೆ ಗಡಿಬಿಡಿ ಮಾಡಿ ರಾಷ್ಟ್ರಪತಿಆಳ್ವಿಕೆ ಹೇರಲು ಶಿಪಾರಸು ಮಾಡಲಾಯಿತು ಎಂದು ಪ್ರಶ್ನಿಸಿದ್ದಾರೆ. ಒಂದುವೇಳೆ ಕೋರ್ಟ್ ತೀರ್ಪು ರಾಷ್ಟ್ರಪತಿ ಆಡಳಿತದ ಪರವಾಗಿಲ್ಲದಿದ್ದರೆ ಪ್ರಧಾನಿ ಬಳಿ ಏನು ಉತ್ತರವಿದೆ. ಅವರು ಏನು ಸಮರ್ಥನೆ ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕಿಂತ ಮೊದಲು ಗುವಾಹತಿ ಹೈಕೋರ್ಟ್ ವಿಧಾನಸಬಾ ಅಧ್ಯಕ್ಷರ ವಿರುದ್ಧ ತಂದ ಅವಿಶ್ವಾಸ ಪ್ರಸ್ತಾವವನ್ನು ಕೂಡ ರದ್ದುಪಡಿಸಿತ್ತು ಎಂಬುದನ್ನು ಅವರು ನೆನಪಿಸಿದ್ದಾರೆ.ಕಳೆದ ಡಿಸೆಂಬರ್ 16ನೆ ತಾರೀಕಿನಿಂದ ಅರುಣಾಚಲದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News