ಕಾಸರಗೋಡು : ಐದನೆ ದಿನಕ್ಕೆ ಕಾಲಿಟ್ಟ ಎಂಡೋಸಲ್ಫಾನ್ ಸಂತ್ರಸ್ಥರ ಧರಣಿ
Update: 2016-01-30 16:07 IST
ಕಾಸರಗೋಡು : ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಂಡೋಸಲ್ಫಾನ್ ಸಂತ್ರಸ್ಥರು ತಿತುವನಂತಪುರದ ಸಚಿವಾಲಯದ ಮುಂಭಾಗದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಶನಿವಾರ ಐದನೇ ದಿನಕ್ಕೆ ಕಾಲಿಟ್ಟಿದೆ.
ಮುಸ್ಖರಕ್ಕೆ ಸೋಲಿಡಾರಿಟಿ , ಎ ಐ ಟಿ ಯು ಸಿ , ಎನ್ ಜಿ ಓ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ.
ಶನಿವಾರದಂದು ಮಾಜಿ ಸಚಿವ ಕೆ . ಪಿ ರಾಜೇಂದ್ರನ್ , ಸಿ ಪಿ ಐ ಮುಖಂಡ ಪಣ್ಯನ್ ರವೀಂದ್ರನ್ , ಬಿನೋಯ್ ವಿಶ್ವ೦, ಬಿ . ಆರ್ ಪಿ ಭಾಸ್ಕರ್ ಮೊದಲಾದವರು ಭೇಟಿ ನೀಡಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.
ಶುಕ್ರವಾರ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಜೊತೆ ಹೋರಾಟ ಸಮಿತಿ ಮುಖಂಡರು ಮಾತುಕತೆ ನಡೆಸಿದರೂ ವಿಫ಼ಲ ಗೊಂಡ ಹಿನ್ನಲೆಯಲ್ಲಿ ಸತ್ಯಾಗ್ರಹ ಐದನೇ ದಿನವೂ ಮುಂದುವರಿದಿದೆ.