×
Ad

ಹಿಂದೂ ಮಹಾಸಭಾ ದಿಂದ ಗಾಂಧೀಜಿ ಹತ್ಯೆಗೆ ಸಂಭ್ರಮಾಚರಣೆ , ಸಿಹಿ ವಿತರಣೆ, ಡ್ಯಾನ್ಸ್

Update: 2016-01-30 17:46 IST

ಮೀರತ್ , ಜ 30 : ಅಖಿಲ ಭಾರತೀಯ ಹಿಂದೂ ಮಹಾಸಭಾ ಸಂಸ್ಥೆ ಇಲ್ಲಿನ ತನ್ನ ಕಚೇರಿಯಲ್ಲಿ ಶನಿವಾರ ಮಹಾತ್ಮ ಗಾಂಧೀಜಿಯ ಹತ್ಯೆಯ ದಿನವನ್ನು ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದೆ. ಅಷ್ಟೇ ಅಲ್ಲದೆ , ಸಂಘಟನೆಯ ಕಾರ್ಯಕರ್ತರು  ಈ ಸಂದರ್ಭದಲ್ಲಿ ಖ್ಯಾತ ಬಾಲಿವುಡ್ ಹಾಡುಗಳಿಗೆ ಹಿಂದೂ ಮಹಾಸಭಾದ ಕಚೇರಿಯ ಹೊರಗೆ ಕುಣಿದು ಕುಪ್ಪಳಿಸಿದರು. ಇದೇ ಸಂಘಟನೆಯ ಸದಸ್ಯರು ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತೀಯ ಸಂವೆಧಾನವನ್ನು ವಿರೋಧಿಸಿ ಕಪ್ಪು ದಿನ ಆಚರಿಸಿದ ಕೆಲವೇ ದಿನಗಳ ಬಳಿಕ ಈ ಆಘಾತಕಾರಿ ವರ್ತನೆ ನಡೆದಿದೆ. 

" ಈ ದೇಶದ ಹೀರೋ ನಾಥೂರಾಮ್ ಗೋಡ್ಸೆ ಗಾಂಧಿಯನ್ನು ಈ ದಿನ 1948 ರಲ್ಲಿ ಮುಗಿಸಿಬಿಟ್ಟ ಎಂಬುದನ್ನು ನಾವು ಸಂಭ್ರಮಿಸುತ್ತಿದ್ದೇವೆ. ಪ್ರತಿ ವರ್ಷ ನಾವು ಸಿಹಿ ಹಂಚುತ್ತೇವೆ, ವೃತ್ತಿಪರ ಬ್ಯಾಂಡ್ಗಳನ್ನೂ ಬಾಡಿಗೆಗೆ ಪಡೆದು ಅವರ ತಾಳಕ್ಕೆ ತಕ್ಕಂತೆ ಕುಣಿಯಲು ಹಾಗು ನಮ್ಮ ಸಂತೋಷ ವ್ಯಕ್ತ ಪಡಿಸಲು ಜನರನ್ನು ಆಹ್ವಾನಿಸುತ್ತೇವೆ  ಎಂದು ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಅಶೋಕ್ ಶರ್ಮ ತಿಳಿಸಿದ್ದಾರೆ. 

ಇನ್ನೊಬ್ಬ ಪದಾಧಿಕಾರಿ ಪಂಡಿತ್ ಶರ್ಮ ಅವರ ಪ್ರಕಾರ ಜನವರಿ 30 ಹಿಂದುತ್ವ ಕಾರ್ಯಕರ್ತರ ಪಾಲಿಗೆ " ಹಬ್ಬದ ದಿನ ".  ಭಾರತ ಒಂದು ಹಿಂದೂ ರಾಷ್ಟ್ರವಾಗಿದ್ದು ಗೋಡ್ಸೆ ಅದರ ಹೀರೋ ಆಗಬೇಕು . ಗೋಡ್ಸೆ ಭಾರತವನ್ನು "ಗಾಂಧೀ ಹಾಗು ಅವರ ವಿಭಜನೆಯ ಪ್ರಸ್ತಾವದಿಂದ" ರಕ್ಷಿಸಲು ಪ್ರಯತ್ನಿಸಿದ "ಹುತಾತ್ಮ" ಎಂದೂ ಅವರು ಬಣ್ಣಿಸಿದರು . 

ಗಾಂಧೀಜಿಗೆ ಯಾವುದೇ ಅನುಯಾಯಿಗಲಿರಲಿಲ್ಲ . ಆದರೆ ಇಡೀ ಭಾರತ ದೇಶ ಗೋಡ್ಸೆಯನ್ನು ಅನುಸರಿಸುತ್ತಿತ್ತು ಎಂದೂ ಪಂಡಿತ್ ಶರ್ಮ ಹೇಳಿದರು . 

ಕಳೆದ ವರ್ಷ ಇದೇ ಸಂಘಟನೆ ನಾಥೂರಾಮ್ ಗೋಡ್ಸೆಯ ಪ್ರತಿಮೆ ಅನಾವರಣ ಮಾಡಲು ಹೊರಟಿತ್ತು . ಬಳಿಕ ಆಯಾ ರಾಜ್ಯ ಸರಕಾರಗಳು ಅದನ್ನು ತಡೆದು ಸಂಘಟನೆಯ ಕಚೇರಿಗೆ ಬೇಗ ಜಡಿದಿದ್ದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News