ಸುಳ್ಯ: ಅತಿಥಿ ಉಪನ್ಯಾಸಕರನ್ನು ಬೆಂಬಲಿಸಿ ಪ್ರತಿಭಟನೆ,
Update: 2016-01-30 18:07 IST
ಸುಳ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರಕಾರಿ ಕಾಲೇಜಿನ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಹೋರಾಟ ಹಾಗೂ ಪ್ರತಿಭಟನೆಗೆ ಬೆಂಬಲ ಸೂಚಿಸಿ ಎ.ಬಿ.ವಿ.ಪಿ.ಯ ಸುಳ್ಯ ನಗರ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.
ಸುಳ್ಯ ತಾಲೂಕು ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಸುಳ್ಯ ನಗರ ಬಿಜೆಪಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಎಬಿವಿಪಿ ಪ್ರಮುಖರಾದ ಹರಿಪ್ರಸಾದ್ ಎಲಿಮಲೆ ಮೊದಲಾದವರು ಮಾತನಾಡಿದರು. ಅಜಿತ್ ಕಣೆಮರಡ್ಕ, ನವನೀತ್, ವಿಕಾಸ್ ಮೊದಲಾದವರು ಉಪಸ್ಥಿತರಿದ್ದರು.