ಮಂಗಳೂರು; ಹಾಲು ಒಕ್ಕೂಟದ ನೂತನ ತಂತ್ರಜ್ಞಾನ ಬಿಡುಗಡೆ
Update: 2016-01-30 18:17 IST
ಮಂಗಳೂರು ಜ, 30 ; ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನೂತನವಾಗಿ ಜಾರಿಗೆ ತಂದಿರುವ ಹಾಲು ಉತ್ಪಾದಕರಿಂದ ಡೀಲರ್‌ಗಳವರೆಗಿನ ಮೇಘ ತಂತ್ರಜ್ಞಾನ ಆಧಾರಿತ ಉದ್ಯಮ ಸಂಪನ್ಮೂಲ ಯೋಜನೆಯ ತಂತ್ರಾಂಶ ಬಿಡುಗಡೆ ಸಮಾರಂಭ ಮಂಗಳೂರು ಡೇರಿ ಸಭಾಂಗಣದಲ್ಲಿ ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ದ.ಕ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಉದ್ಯಮ ಸಂಪನ್ಮೂಲ ಮಾರುಕಟ್ಟೆ ತಂತ್ರಾಂಶ ಬಿಡುಗಡೆ ಮಾಡುವರು. ದ.ಕ ಜಿಲ್ಲಾ ಪೋಲೀಸ್ ಅಧೀಕ್ಷಕ ಡಾ. ಶರಣಪ್ಪ ಡೀಲರ್‌ಗಳಿಗೆ ಮೊಬೈಲ್ ಆಪ್ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.