ಮಂಗಳೂರು; ಝಿಕಾ ವೈರಸ್ ಗೆ ಹೆದರುವ ಅಗತ್ಯವಿಲ್ಲ : ಡಾ. ಶ್ರೀನಿವಾಸ ಕಕ್ಕಿಲ್ಲಾಯ

Update: 2016-01-30 13:15 GMT

ಮಂಗಳೂರು , ಜ ೩೦ : ಝಿಕಾ ವೈರಸ್ ಗೆ ಹೆದರುವ ಅಗತ್ಯವಿಲ್ಲ. ಅದು ೮೦% ಲಕ್ಷಣರಹಿತವಾಗಿದ್ದು ಕೇವಲ ೨೦% ಮಾತ್ರ ಅದು ಸ್ವಲ್ಪ ಜ್ವರ, ಸ್ವಲ್ಪ ಕೀಲು ನೋವುದಂತಹ ಲಕ್ಷಣಗಳನ್ನು ತೋರಿಸುತ್ತದೆ. ಮೊದಲ ಮೂರು ತಿಂಗಳ ಗರ್ಭಿಣಿ ಮಹಿಳೆಯರಿಗೆ ಮಾತ್ರ ರಿಸ್ಕ್ ಇದ್ದು ಅವರಲ್ಲಿ ಝಿಕಾ ವೈರಸ್ ಗೆ ಪರೀಕ್ಷೆ ಮಾಡಿ ಮಗು ಆರೋಗ್ಯವಾಗಿದೆ ಎಂದು ತಿಳಿಯಲು ಹೊಸ ಪರೀಕ್ಷೆಗಳನ್ನು ಇನ್ನಷ್ಟೇ ಅಭಿವೃದ್ಧಿಪಡಿಸಬೇಕಾಗಿದೆ ಎಂದು ಮಂಗಳೂರಿನ ಹಿರಿಯ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಹೇಳಿದ್ದಾರೆ.  

ಆರೋಗ್ಯ ಸಚಿವರು ವಿಮಾನ ನಿಲ್ದಾಣಗಳಲ್ಲಿ ಬಂದವರನ್ನು ಪರೀಕ್ಷೆ ಮಾಡಿ ಪ್ರಯೋಜನವಿಲ್ಲ . ಏಕೆಂದರೆ ಅವರಲ್ಲಿ ಹೆಚ್ಚಿನವರಲ್ಲಿ ಅದರ ಲಕ್ಷಣಗಳು ಕಾಣುವುದಿಲ್ಲ . ಅದರ ಬದಲಿಗೆ ಸೊಳ್ಳೆ ಉತ್ಪಾದನಾ ಜಾಗಗಳನ್ನು ನಿರ್ಮೂಲನೆ ಮಾಡುವ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು . ಅದರಲ್ಲೂ "ಏಡಿಸ್ ಅಜಿಪ್ಟಿ " ಸೊಳ್ಳೆ ನಿರ್ಮೂಲನೆಗೆ ಒಟ್ಟು ನೀಡಬೇಕು. ಈ ಸೊಳ್ಳೆ ಇಲ್ಲದ ಚಿಲಿ ಹಾಗು ಕೆನಡಗಳಲ್ಲಿ ಝಿಕಾ ದ ರಿಸ್ಕೇ ಇಲ್ಲ ಎಂದು ಕಕ್ಕಿಲ್ಲಾಯ ಹೇಳಿದರು. 

ಝಿಕಾ ದ ಮೊದಲ ಪ್ರಕರಣ ದಕ್ಷಿಣ ಪೂರ್ವ ಏಷ್ಯಾದಲ್ಲಿ ೧೯೬೬ ರಲ್ಲಿ ಪತ್ತೆಯಾಯಿತು ಹಾಗು ೧೯೭೦ ರಲ್ಲಿ ಅದು ಪಾಕಿಸ್ತಾನ್, ಭಾರತ , ಮಲೇಶಿಯ ಹಾಗು ಇಂಡೋನೇಷಿಯಗಳಲ್ಲಿ ಪತ್ತೆಯಾಯಿತು ಎಂಬ ವರದಿಗಳಿರುವುದರಿಂದ ಈ ವೈರಸ್ ಭಾರತೀಯರಲ್ಲಿ ಸುಪ್ತವಾಗಿರುವ ಸಾಧ್ಯತೆ ಇದೆ ಎಂದು ಕಕ್ಕಿಲ್ಲಾಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News