×
Ad

ಮೂಡುಬಿದಿರೆ:ಎನ್ನೆಸೆಸ್ ರಾಷ್ಟ್ರೀಯ ಭಾವೈಕ್ಯ ಶಿಬಿರ,

Update: 2016-01-30 19:06 IST

ಮೂಡುಬಿದಿರೆ: ಕರ್ನಾಟಕ ಸರ್ಕಾರದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೇಂದ್ರ ಸರ್ಕಾರದ ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶನಾಲಯ, ಬೆಂಗಳೂರು, ರಾಜ್ಯ ಎನ್‌ಎಸ್‌ಎಸ್ ಘಟಕ , ಮಂಗಳೂರು ವಿ.ವಿ. ಎನ್‌ಎಸ್‌ಎಸ್ ಮತ್ತು ಮೂಡುಬಿದಿರೆಯ ಆಳ್ವಾಸ್ ಕಾಲೇಜು ಇವುಗಳ ಆಶ್ರಯದಲ್ಲಿ ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಭಾವೈಕ್ಯ ಶಿಬಿರಕ್ಕೆ ಚಾಲಬೆ ನೀಡಲಾಯಿತು. ಕೇಂದ್ರ ಸರ್ಕಾರದ ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶನಾಲಯ ಬೆಂಗಳೂರು ಇದರ ಪ್ರಾದೇಶಿಕ ನಿರ್ದೇಶಕ ಎ. ಎನ್. ಪೂಜಾರ್ ಮುಖ್ಯ ಅತಿಥಿಯಾಗಿ ಮಾತನಾಡಿ, ನೈಜ್ಯ ಬದುಕಿನ ಸ್ವರೂಪದ ಕುರಿತು ತಿಳುವಳಿಕೆಯನ್ನು ಎನ್ನೆಸೆಸ್ ತಿಳಿಸುತ್ತದೆ. ಸಾಂಘಿಕ ಚಿಂತನೆ, ಸಾಂಸ್ಕೃತಿಕ ವಿನಿಮಯದೊಂದಿಗೆ ಜ್ಞಾನವನ್ನು ವೃದ್ಧಿಸುತ್ತದೆ. ಎನ್ನೆಸೆಸ್‌ನಲ್ಲಿ ಗಳಿಸುವ ಸುವಿಚಾರದ ಅನುಭಗಳಿಂದ ವ್ಯಕ್ತಿತ್ವ ರೂಪಿಸಲು ಸಾಧ್ಯ ಎಂದರು.

ಎನ್‌ಎಸ್‌ಎಸ್ ರಾಜ್ಯ ಸಂಪರ್ಕಾಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಮುಖ್ಯ ಅತಿಥಿಯಾಗಿ ಮಾತನಾಡಿ, ‘ ಎನ್ನೆಸೆಎಸ್ ಮುಖಾಂತರ ವ್ತಕ್ತಿತ್ವ ರೂಪಿಸುವುದರೊಂದಿಗೆ 34 ಲಕ್ಷದಷ್ಟಿರುವ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣಕ್ಕೂ ಕೊಡುಗೆಯನ್ನು ನೀಡುತ್ತಿದ್ದಾರೆ. ಸಾಮಾನತೆ ಹಾಗೂ ಸಾಮಾಜಿಕ ಬದ್ಧತೆ ಯುವಜನರಲ್ಲಿ ಜಾಗೃತಗೊಳ್ಳಲು ಎನ್‌ಎಸ್‌ಎಸ್ ಅವಕಾಶ ಕಲ್ಪಿಸುತ್ತಿದೆ ಎಂದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಿದ್ದಗಲೂ ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿಸಲು ಎನ್ನೆಸೆಸ್ ಪ್ರೇರಣಾದಾಯಿಕ ಎಂದರು. ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಪ್ರೊ.ವಿನೀತಾ ಕೆ. ಸ್ವಾಗತಿಸಿದರು. ದೀಪಾ ಕೊಟ್ಟಾರಿ ನಿರೂಪಿಸಿದರು. ಆಳ್ವಾಸ್ ಎನ್‌ಎಸ್‌ಎಸ್ ಅಕಾರಿ ಗುರುದೇವ ಎನ್ ವಂದಿಸಿದರು. ಎನ್‌ಎಸ್‌ಎಸ್ ಅಧಿಕಾರಿ, ಶಿಬಿರ ಸ್ಥಾನೀಯ ಉಸ್ತುವಾರಿ ಚಂದ್ರಶೇಖರ ಗೌಡ ಉಪಸ್ಥಿತರಿದ್ದರು. ಕರ್ನಾಟಕ , ಕೇರಳ, ತಮಿಳ್ನಾಡು, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಒರಿಸ್ಸಾ ರಾಜ್ಯಗಳ 140 ಮಂದಿ ಮತ್ತು ಸ್ಥಳೀಯ ಎನ್ನೆಸೆಸ್ ವಿದ್ಯಾರ್ಥಿಗಳು ಹಾಗೂ 10 ಮಂದಿ ಕಾರ್ಯಕ್ರಮ ಅಕಾರಿಗಳು ಫೆ. 4ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಎನ್ನೆಸೆಸ್ ರಾಷ್ಟ್ರೀಯ ಭಾವೈಕ್ಯ ಶಿಬಿರವನ್ನು ಎ. ಎನ್. ಪೂಜಾರ್ ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News