ಮುಲ್ಕಿ,;ಕ್ಯಾಂಪಸ್ ಇಂಟರ್ವ್ಯೂ
Update: 2016-01-30 19:38 IST
ಮುಲ್ಕಿ, ಜ.30: ಸಾಧನೆಯ ತುತ್ತ ತುದಿಗೇರಬೇಕೆಂಬ ಹಂಬಲವಿರುವ ಒಬ್ಬ ವಿದ್ಯಾರ್ಥಿಯು ಸಕಾರಾತ್ಮಕ ಆತ್ಮವಿಶ್ವಾಸದೊಂದಿಗೆ ಬರುವ ಎಲ್ಲಾ ಅವಕಾಶಗಳನ್ನು ಯೋಜಿತವಾಗಿ ಬಳಸಿಕೊಳ್ಳಬೇಕೆಂದು ಹಿಂದುಜಾ ಗ್ಲೋಬಲ್ ಸೊಲ್ಯೂಶನ್ಸ್ ಸಂಸ್ಥೆಯ ಮಾವ ಸಂಪನ್ಮೂಲ ಅಧಿಕಾರಿ ರೋಶನ್ ರೋಚ್ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಇದರ ಉದ್ಯೋಗ ಮಾರ್ಗದರ್ಶನ ಮತ್ತು ವೃತ್ತಿ ನಿಯೋಜನಾ ಕೋಶ ಮತ್ತು ಹಿಂದುಜಾ ಗ್ಲೋಬಲ್ ಸೊಲ್ಯೂಶನ್ಸ್ ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ಜರಗಿದ ಕ್ಯಾಂಪಸ್ ಸಂದರ್ಶನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಕಾಲೇಜಿನ ಉದ್ಯೋಗ ಮಾರ್ಗದರ್ಶನ ಮತ್ತು ವೃತ್ತಿ ನಿಯೋಜನಾ ಕೋಶದ (ಕೆರಿಯರ್ ಗೈಡೆನ್ಸ್ ಸೆಲ್)ಸಂಯೋಜಕ ಡಾ.ಸಂತೋಷ್ ಪಿಂಟೊ ಶಿರ್ತಾಡಿ ಕಾರ್ಯಕ್ರಮವನ್ನು ಆಯೋಜಿಸಿ ಅತಿಥಿಗಳನ್ನು ಸ್ವಾಗತಿಸಿದರು.ಪ್ರಾಂಶುಪಾಲ ಪ್ರೊ. ವಿಶ್ವನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿಂದುಜಾ ಗ್ಲೋಬಲ್ ಸೊಲ್ಯೂಶನ್ಸ್ ಸಂಸ್ಥೆಯ ಪ್ರತಿನಿಧಿ ಕಿಶೋರ್ ಉಪಸ್ಥಿತರಿದ್ದರು.