ಕಟೀಲು; ಸಂಸ್ಕ್ರತ ಕಾಲೇಜಿನಲ್ಲಿ ರಾಷ್ಟ ಮಟ್ಟದ ವಿಚಾರಗೋಷ್ಟಿ
ಕಟೀಲು, ಜ.30: ಯುವ ಚೇತನಗಳು ಸಂಸ್ಕ್ರತವನ್ನು ಸಾಂಪ್ರದಾಯಿಕವಾಗಿ, ಶಿಸ್ತುಬದ್ದವಾಗಿ ಮುಂದುವರಿಸಿಕೊಂಡು ಹೋಗಬೇಕು ಎಂದುಕಟೀಲು ದೇವಳದ ಆಡಳಿತ ಮುಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು.
ಕಟೀಲು ಶ್ರೀ ದುರ್ಗಾ ಸಂಸ್ಕ್ರತ ಸ್ನಾತಕೋತ್ತರ ಅಧ್ಯಯನ ಕಾಲೇಜಿನಲ್ಲಿ ನಡೆದ ರಾಷ್ಟ ಮಟ್ಟದ ಸಂಸ್ಕ್ರತ ವಿಚಾರ ಗೋಷ್ಟಿಯನ್ನು ಉದ್ಘಟಿಸಿ ಮಾತನಾಡಿದರು, ಸಂಪನ್ಮೂಲ ವ್ಯಕಿ ಬೆಂಗಳೂರು ಅಗ್ರಗಾಮಿ ಸಮೂಹ ಸಂಸ್ಥೆಗಳ ನಿರ್ದೆಶಕ ಎಚ್.ಆರ್ ಸತೀಶ್ ಚಂದ್ರ ಮಾತನಾಡಿ, ಸಂಸ್ಕ್ರತ ಆಯುರ್ವೇದ ಯಜ್ಞಗಳ ಬಗ್ಗೆ ವೈಜ್ಞಾನಿಕ ಚಿಂತನೆ ಅಗತ್ಯ ಎಂದರು. ಕಟೀಲು ದೇವಳದ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಆಶೀರ್ವಾಚನ ನೀಡಿದರು.ಈ ಸಂದರ್ಭ ಪ್ರೋ.ಶೀನಿವಾಸ್ ವಾರ್ಕೇಡಿ ಉಪಸ್ಥಿತರಿದ್ದರು.
ಕಟೀಲು ಶ್ರೀ ದುರ್ಗಾ ಸಂಸ್ಕ್ರತ ಸ್ನಾತಕೋತ್ತರ ಅಧ್ಯಯನ ಕಾಲೇಜಿನ ಪ್ರಾಶುಂಪಾಲ ಡಾ. ಪದ್ಮನಾಭ ಮರಾಠೆ ಸ್ವಾಗತಿಸಿ, ಶಿರಸಿ ಸಂಸ್ಕ್ರತ ಶೋಧ ಸಂಸ್ಥಾನ ಅಧ್ಯಕ್ಷ ಡಾ. ಜಿ,ಎನ್ ಭಟ್ ಪ್ರಸ್ತಾವನೆಗೈದರು, ಪ್ರಾದ್ಯಾಪಕ ಡಾ. ನಾಗರಾಜ್ ಬಿ ವಂಧಿಸಿದರು,