ಮೂಡುಬಿದ್ರೆ; ಬಯಲಾಟ ಖ್ಯಾತ ಕಲಾವಿದರಿಗೆ ಸನ್ಮಾನ,
Update: 2016-01-30 19:48 IST
ಮೂಡುಬಿದ್ರೆ, ಪುತ್ತಿಗೆ ಮುರಂತಕೋಡಿಯ ಲಕ್ಷೀ ಅಮ್ಮ ಕುಟುಂಬಿಕರ ಸೇವಾರ್ಥ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ನಡೆದ ಬಯಲಾಟದ ಸಂದರ್ಭ ನಡೆದ ಸಮಾರಂಭದಲ್ಲಿ ಖ್ಯಾತ ಕಲಾವಿದರಾದ ಪಟ್ಲ ಸತೀಶ ಶೆಟ್ಟಿ, ದಿವಾಣ ಶಿವಶಂಕರ ಭಟ್ ಹಾಗೂ ಉಜಿರೆ ನಾರಾಯಣ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ , ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಉದ್ಯಮಿ ಶ್ರೀಪತಿ ಭಟ್, ನಿವೃತ್ತ ಶಿಕ್ಷಕ ವಾದಿರಾಜ ಮಡ್ಮಣ್ಣಾಯ, ಸೂರ್ಯಕುಮಾರ್ ಮತ್ತಿತರರಿದ್ದರು.