×
Ad

ವಿಂಡೀಸ್‌ನ ವಿಶ್ವಕಪ್ ತಂಡಕ್ಕೆ ನರೇನ್

Update: 2016-01-31 00:25 IST

ಗಯಾನಾ, ಜ.30: ವೆಸ್ಟ್ ಇಂಡೀಸ್ ಆಯ್ಕೆ ಸಮಿತಿ ಮುಂಬರುವ ಟ್ವೆಂಟಿ-20 ವಿಶ್ವಕಪ್ ತಂಡಕ್ಕೆ ಹದಿನೈದು ಮಂದಿ ಆಟಗಾರರ ತಂಡವನ್ನು ಆಯ್ಕೆ ಮಾಡಿದ್ದು, ಅಮಾನತುಗೊಂಡಿರುವ ಆಫ್ ಸ್ಪಿನ್ನರ್ ಸುನೀಲ್ ನರೇನ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ.
27ರ ಹರೆಯದ ನರೇನ್ ಅವರನ್ನು ಶ್ರೀಲಂಕಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಸಂಶಯಾಸ್ಪದ ಬೌಲಿಂಗ್ ಶೈಲಿಯ ಕಾರಣಕ್ಕಾಗಿ ಅಮಾನತು ಮಾಡಿತ್ತು. ಹೀಗಿದ್ದರೂ ಅವರನ್ನು ಟ್ವೆಂಟಿ-20 ತಂಡಕ್ಕೆ ಆಯ್ಕೆ ಮಾಡಿರುವ ಬಗ್ಗೆ ಅಚ್ಚರಿ ಮೂಡಿದೆ.
ಕಳೆದ 50 ಓವರ್‌ಗಳ ವಿಶ್ವಕಪ್‌ನಲ್ಲೂ ವಿಂಡೀಸ್ ತಂಡಕ್ಕೆ ನರೇನ್ ಆಯ್ಕೆಯಾಗಿದ್ದರು. ಬಳಿಕ ಅವರನ್ನು ಕೈ ಬಿಡಲಾಗಿತ್ತು. ಇದೀಗ ಟ್ವೆಂಟಿ-20 ವಿಶ್ವಕಪ್‌ನ ಮೊದಲು ನರೇನ್ ವಿರುದ್ಧದ ನಿಷೇಧ ತೆರವಾಗುವ ಸಾಧ್ಯತೆ ಇದೆ ಎಂದು ವಿಂಡೀಸ್‌ನ ಕ್ರಿಕೆಟಿಗರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
 ಆಲ್‌ರೌಂಡರ್ ಡರೆನ್ ಸಮ್ಮಿ ಐಸಿಸಿ ಟ್ವೆಂಟಿ-20ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ವಿಂಡೀಸ್ ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ಧಾರೆ. ನಾಲ್ಕು ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ನಡೆದ ವಿಶ್ವಕಪ್ ಜಯಿಸಿದ ತಂಡದಲ್ಲಿದ್ದ ಆಟಗಾರರ ಪೈಕಿ 11 ಮಂದಿ ಆಟಗಾರರು ಈಗಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
15 ಮಂದಿ ತಂಡ ಯುಎಇಯಲ್ಲಿ ಫೆ.22ರಿಂದ ಮಾ. 7ರ ತನಕ ನಡೆಯಲಿರುವ ಪೂರ್ವ ತಯಾರಿ ಶಿಬಿರದಲ್ಲಿ ಭಾಗವಹಿಸಲಿದೆ.
ತಂಡ: ಡರೆನ್ ಸಮ್ಮಿ(ನಾಯಕ), ಸ್ಯಾಮುಯೆಲ್ ಬದ್ರಿ, ಸುಲೈಮಾನ್ ಬೆನ್, ಡರನ್ ಬ್ರಾವೋ, ಆ್ಯಂಡ್ರೆ ಫ್ಲೆಚೆರ್, ಕ್ರಿಸ್ ಗೈಲ್, ಜೇಸನ್ ಹೋಲ್ಡರ್, ಸುನೀಲ್ ನರೇನ್, ಕೀರನ್ ಪೊಲಾರ್ಡ್, ದಿನೇಶ್ ರಾಮ್ದಿನ್, ಅಂಡ್ರೆ ರಸ್ಸೆಲ್, ಮರ್ಲಾನ್ ಸ್ಯಾಮುಯೆಲ್ಸ್, ಲೆಂಡ್ಲ್ ಸೈಮೊನ್ಸ್, ಜೆರೊಮೆ ಟೇಲರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News