×
Ad

ಯತಿಗಳಿಂದ ಕರಾವಳಿಯಲ್ಲಿ ಧರ್ಮ, ಪರಿಸರ ರಕ್ಷಣೆ: ಪೇಜಾವರ ಶ್ರೀ

Update: 2016-01-31 00:26 IST

ಉಡುಪಿ, ಜ.30: ಕರಾವಳಿಯಲ್ಲಿರುವ ವಿವಿಧ ಮಠಾಧೀಶರು ಹಾಗೂ ಸ್ವಾಮೀಜಿಗಳಿಂದ ಧರ್ಮ ಹಾಗೂ ಪರಿಸರ ಸಂರಕ್ಷಣೆ ಕಾರ್ಯ ನಡೆಯುತ್ತಿದೆ ಎಂದು ಪರ್ಯಾಯ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪೇಜಾವರ ಸ್ವಾಮೀಜಿಯ ಚಾರಿತ್ರಿಕ ಪಂಚಮ ಪರ್ಯಾ ಯೋತ್ಸವದ ಪ್ರಯುಕ್ತ ಶನಿವಾರ ರಾಜಾಂಗಣದಲ್ಲಿ ನಡೆದ ಕರಾವಳಿ ಜಿಲ್ಲೆಗಳ ವಿವಿಧ ಮಠಗಳ ಮಠಾಧೀಶರು ಹಾಗೂ ಸ್ವಾಮೀಜಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.

ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಆಶೀರ್ವಚನ ನೀಡಿದರು. ಬಾಳ್ಕುದ್ರು ಶ್ರೀ ನೃಸಿಂಹಾಶ್ರಮ ಸ್ವಾಮೀಜಿ, ಒಡಿಯೂರು ಶ್ರೀಗುರು ದೇವಾ ನಂದ ಸ್ವಾಮೀಜಿ, ಕಟಪಾಡಿ ಆನೆಗೊಂದಿ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಗುರುಪುರ ವಜ್ರದೇಹಿ ಶ್ರೀರಾಜಶೇಖರಾನಂದ ಸ್ವಾಮೀಜಿ, ಮೂಡಬಿದ್ರೆ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕೊಲ್ಯ ಶ್ರೀರಮಾನಂದ ಸ್ವಾಮೀಜಿ, ಹೊಸ್ಮಾರು ಶ್ರೀವಿಖ್ಯಾತಾನಂದ ಸ್ವಾಮೀಜಿ, ಕರಿಂಜ ಶ್ರೀ ಮುಕ್ತಾನಂದ ಸರಸ್ವತಿ ಸ್ವಾಮೀಜಿ, ಬಾರಕೂರಿನ ಶ್ರೀ ವಿಶ್ವಭಾರತಿ ಸಂತೋಷ್ ಗುರೂಜಿ, ಬನ್ನಂಜೆ ಶ್ರೀರಾಘವೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಈ ಸಂದರ್ಭ ಪೇಜಾವರ ಶ್ರೀ ಎಲ್ಲ ಸ್ವಾಮೀಜಿಗಳಿಗೆ ಗೌರವಾರ್ಪಣೆ ಸಲ್ಲಿಸಿದರು. ವಾಸುದೇವ ಭಟ್ ಸ್ವಾಗತಿಸಿದರು. ಇದಕ್ಕೂ ಮುನ್ನ ಯತಿಗಳನ್ನು ಸಂಸ್ಕೃತ ಕಾಲೇಜಿನಿಂದ ಮೆರವಣಿಗೆಯಲ್ಲಿ ಮಠಕ್ಕೆ ಕರೆತರಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News