ಅಂತಿಮ ಟ್ವೆಂಟಿ -20 ಪಂದ್ಯಕ್ಕೆ ವ್ಯಾಟ್ಸನ್ ನಾಯಕ
Update: 2016-01-31 00:26 IST
ಸಿಡ್ನಿ, ಜ.30: ರವಿವಾರ ನಡೆಯಲಿರುವ ಭಾರತ ವಿರುದ್ಧದ ಟ್ವೆಂಟಿ-20 ಸರಣಿಯ ಮೂರನೆ ಹಾಗೂ ಅಂತಿಮ ಪಂದ್ಯಕ್ಕೆ ಆಸ್ಟ್ರೇಲಿಯ ತಂಡವನ್ನು ನಾಯಕರಾಗಿ ಅನುಭವಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಮುನ್ನಡೆಸಲಿದ್ದಾರೆ.
ಮೆಲ್ಬೋರ್ನ್‌ನಲ್ಲಿ ಶುಕ್ರವಾರ ನಡೆದ ಎರಡನೆ ಪಂದ್ಯದ ವೇಳೆ ನಾಯಕ ಆ್ಯರೊನ್ ಫಿಂಚ್ ಗಾಯಗೊಂಡಿದ್ದರು. ಅವರು ಅಂತಿಮ ಪಂದ್ಯಕ್ಕೆ ಲಭ್ಯರಿಲ್ಲ. ಈ ಕಾರಣದಿಂದಾಗಿ ವ್ಯಾಟ್ಸನ್ ತಂಡವನ್ನು ನಾಯಕರಾಗಿ ಮುನ್ನಡೆಸುತ್ತಿದ್ದಾರೆ. ಫಿಂಚ್ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದರು. ಆಸ್ಟ್ರೇಲಿಯ 27 ರನ್‌ಗಳ ಸೋಲು ಅನುಭವಿಸಿತ್ತು.
ಎಡಗೈ ಬ್ಯಾಟ್ಸಮನ್ ಉಸ್ಮಾನ್ ಖ್ವಾಜಾ ಅವರು ಫಿಂಚ್ ಬದಲಿಗೆ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಖ್ವಾಜಾ ಈಗಾಗಲೇ ನ್ಯೂಝಿಲೆಂಡ್‌ಗೆ ಪ್ರವಾಸ ಕೈಗೊಳ್ಳಲಿರುವ ಏಕದಿನ ತಂಡದಲ್ಲೂ ಸ್ಥಾನ ಪಡೆದಿದ್ಧಾರೆ.