×
Ad

ಪಣಂಬೂರಿನಲ್ಲಿ ಬೀಚ್ ಉತ್ಸವಕ್ಕೆ ಚಾಲನೆ

Update: 2016-01-31 00:27 IST

ಮಂಗಳೂರು, ಜ.30: ದ.ಕ. ಜಿಲ್ಲಾ ಕರಾವಳಿ ಉತ್ಸವದ ಅಂಗವಾಗಿ ಕರಾವಳಿ ಉತ್ಸವ ಸಮಿತಿಯಿಂದ ಪಣಂಬೂರಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಬೀಚ್ ಉತ್ಸವಕ್ಕೆ ಗಾಳಿಪಟವನ್ನು ಹಾರಿಸುವ ಮೂಲಕ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ಶನಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕರಾವಳಿ ಉತ್ಸವದ ಅಂಗವಾಗಿ ಕದ್ರಿ ಪಾರ್ಕ್, ಪುರಭವನ ಹಾಗೂ ಇದೀಗ ಪಣಂಬೂರಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದರ ಮೂಲಕ ದ.ಕ. ಜಿಲ್ಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದರು.
 
ಪಣಂಬೂರಿನಲ್ಲಿ ನಡೆದ ಬೀಚ್ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದೆ. ಪ್ರತಿಭೆಗಳನ್ನು ಪ್ರದರ್ಶಿಸಲು ಬೀಚ್ ಉತ್ಸವದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರಲ್ಲದೆ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರನ್ನೂ ಇದೇ ಸಂದರ್ಭದಲ್ಲಿ ಅವರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಉತ್ತರ ಉಪವಿಭಾಗದ ಎಸಿಪಿ ಮದನ್‌ಗಾಂವ್ಕರ್, ಸಹಾಯಕ ಕಮಿಷನರ್ ಡಾ.ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.

ಮಾಂಸಹಾರಿ, ಸಸ್ಯಹಾರಿ ಖಾದ್ಯ ಸಹಿತ ವಿವಿಧ ಬಗೆಯ ಮೀನಿನ ಖಾದ್ಯಗಳು, ಬಾಂಬೆ ಫಾಲೂದ, ಕಾಲಕಟ್ಟ, ಪಾವ್‌ಬಾಜಿ ಸಹಿತ ಬಾಂಬೆ ಫಾಸ್ಟ್‌ಫುಡ್‌ಗಳ ಮಳಿಗೆಗಳಿದ್ದವು. ಒಂಟೆ ಸವಾರಿ, ಕುದುರೆ ಸವಾರಿ, ಬೋಟಿಂಗ್, ಜಾರು ಬಂಡಿ ಮೊದಲಾದ ಆಟಗಳು ಮಕ್ಕಳು ಹಾಗೂ ದೊಡ್ಡವರನ್ನು ರಂಜಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News