×
Ad

ಕರ್ಣಾಟಕ ಬ್ಯಾಂಕ್‌ನ ಮುಡಿಗೆ ಅಸೋಚಾಮ್‌ನ ನಾಲ್ಕು ಪ್ರಶಸ್ತಿಗಳು

Update: 2016-01-31 00:32 IST

ಮಂಗಳೂರು, ಜ.30: ಖಾಸಗಿ ರಂಗದ ಪ್ರತಿಷ್ಠಿತ ಬ್ಯಾಂಕ್ ಆಗಿರುವ ಕರ್ಣಾಟಕ ಬ್ಯಾಂಕ್ ನಾಲ್ಕು ಅಸೋಚಾಮ್ ಸಾಮಾಜಿಕ ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

ಸಣ್ಣ ಬ್ಯಾಂಕ್‌ಗಳಿಗಾಗಿರುವ ನಗರ ಬ್ಯಾಂಕಿಂಗ್ ಮತ್ತು ಕೃಷಿ ಬ್ಯಾಂಕಿಂಗ್ ವಿಭಾಗಗಳಲ್ಲಿ ಪ್ರಥಮ ಸ್ಥಾನಗಳನ್ನು ಮತ್ತು ಸರಕಾರಿ ಯೋಜನೆಗಳಲ್ಲಿ ಪಾಲ್ಗೊಳ್ಳುವಿಕೆ ಹಾಗೂ ಒಟ್ಟಾರೆ ಅತ್ಯುತ್ತಮ ಸಾಮಾಜಿಕ ಬ್ಯಾಂಕ್ ವಿಭಾಗಗಳಲ್ಲಿ ರನ್ನರ್ ಅಪ್ ಸ್ಥಾನಗಳನ್ನು ಕರ್ಣಾಟಕ ಬ್ಯಾಂಕ್ ತನ್ನದಾಗಿಸಿಕೊಂಡಿದೆ.

ಶುಕ್ರವಾರ ಮುಂಬೈನಲ್ಲಿ ನಡೆದ ವರ್ಣರಂಜಿತ ಸಮಾ ರಂಭದಲ್ಲಿ ಬ್ಯಾಂಕ್‌ನ ಎಂಡಿ ಹಾಗೂ ಸಿಇಒ ಪಿ. ಜಯರಾಮ ಭಟ್ ಅವರು ಕೇಂದ್ರ ಸಹಾಯಕ ವಿತ್ತ ಸಚಿವ ಜಯಂತ್ ಸಿನ್ಹಾ ಅವರಿಂದ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾಜಿಕ, ಪಾರಿಸರಿಕ ಮತ್ತು ನೈತಿಕ ಹೊಣೆಗಾರಿಕೆಗಳನ್ನು ವ್ಯವಹಾರದಲ್ಲಿ ಏಕೀಕೃತಗೊಳಿಸುವುದರಿಂದ ದೀರ್ಘಕಾಲೀನ ಯಶಸ್ಸು ಮತ್ತು ಸುಸ್ಥಿರತೆ ಸಾಧ್ಯ ಎನ್ನುವುದರಲ್ಲಿ ಕರ್ಣಾಟಕ ಬ್ಯಾಂಕ್ ನಂಬಿಕೆಯಿರಿಸಿದೆ. ಬ್ಯಾಂಕ್ ತನ್ನ ಸಾಮಾಜಿಕ ಉಪಕ್ರಮಗಳನ್ನು ಮುಂದುವರಿಸಲಿದೆ ಎಂದು ಹೇಳಿದರು.

ದೇಶಾದ್ಯಂತ 710 ಶಾಖೆಗಳು ಮತ್ತು 1200 ಎಟಿಎಂ ಗಳನ್ನು ಹೊಂದಿರುವ ಕರ್ಣಾಟಕ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ 25 ಇ-ಲಾಬಿಗಳು ಸೇರಿದಂತೆ ಇವುಗಳ ಸಂಖ್ಯೆಯನ್ನು ಅನುಕ್ರಮವಾಗಿ 725 ಮತ್ತು 1275ಕ್ಕೆ ಹೆಚ್ಚಿಸಲು ಉದ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News