ಐತಿಹಾಸಿಕ ಗಾಂಧಿಕಟ್ಟೆಯಲ್ಲಿ ವೌನ ಪ್ರಾರ್ಥನೆ
Update: 2016-01-31 00:33 IST
ಪುತ್ತೂರು, ಜ.30: ನಗರದ ಕೇಂದ್ರಭಾಗದಲ್ಲಿರುವ ಐತಿಹಾಸಿಕ ಗಾಂಧಿಕಟ್ಟೆಯಲ್ಲಿ ಶನಿವಾರ ಪೂರ್ವಾಹ್ನ ವೌನ ಪ್ರಾರ್ಥನೆ, ನುಡಿನಮನ ಸಲ್ಲಿಸಲಾಯಿತು.
ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಪ್ರಮುಖ ಪ್ರೊ.ಬಿ.ಜೆ.ಸುವರ್ಣ, ಹಿಂದೂಸ್ಥಾನ್ ಬಿಲ್ಡರ್ಸ್ ಮತ್ತು ಪ್ರಮೋಟರ್ಸ್‌ನ ಮ್ಯಾನೇಜರ್ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಗಾಂಧಿಕಟ್ಟೆ ಅಭಿವೃದ್ಧಿ ಸಮಿತಿಯ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಮಾತನಾಡಿದರು.
ಪುತ್ತೂರು ನಗರ ಸಂಚಾರ ಪೊಲೀಸ್ ಠಾಣೆ ಎಸ್ಸೈ ನಾಗರಾಜ್ ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಮಾಡಿ ನುಡಿನಮನ ಸಲ್ಲಿಸಿದರು. ನಿವೃತ್ತ ಯೋಧ ರಮೇಶ್ ಬಾಬು, ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಷದ್ ದರ್ಬೆ, ನಗರಸಭಾ ಸದಸ್ಯ ನವೀನ್‌ಚಂದ್ರ, ಪ್ರಮುಖರಾದ ರೋಶನ್ ರೈ, ಪ್ರೇಮಾ, ಸೈಯದ್ ಕಮಾಲ್, ನಾರಾಯಣ ಕುಡ್ವ, ರಫೀಕ್, ಇಕ್ಬಾಲ್ ಪರ್ಲಡ್ಕ, ಯಾಕೂಬ್ ಹಾಜಿ ದರ್ಬೆ ಮತ್ತಿತರರು ಉಪಸ್ಥಿತರಿದ್ದರು.