ಯೆಯ್ಯೆಡಿಯಲ್ಲಿ ವಿಶೇಷ ಸಾಮರ್ಥ್ಯದ ಮಕ್ಕಳಿಗಾಗಿ 'ಟ್ರೆಶರ್ ಹಂಟ್'
ಮಂಗಳೂರು, ಜ.31: ವಿಶೇಷ ಸಾಮರ್ಥ್ಯದ ಮಕ್ಕಳಿಗಾಗಿ ‘ಮರ್ಸಿಡೀಸ್ ಸುಂದರ್‌ರಾಮ್ ಗೈಡಿಂಗ್ ಸ್ಟಾರ್ಸ್-2016’ ಟ್ರೆಶರ್ ಹಂಟ್ ಕಾರ್ಯಕ್ರಮ ರವಿವಾರ ಬೆಳಗ್ಗೆ ಯೆಯ್ಯೆಡಿಯಲ್ಲಿರುವ ಮರ್ಸಿಡೀಸ್ ಶೋರೂಂನಲ್ಲಿ ಜರಗಿತು.
ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್ 190 ಮತ್ತು ಕ್ರೆಡೈ ಮಂಗಳೂರು ಆಶ್ರಯದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಟ್ರೆಶರ್ ಹಂಟ್‌ನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಒಳಿತನ್ನು ನೋಡುವುದಕ್ಕಿಂತ ಇತರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದು ಉತ್ತಮ ಕೆಲಸ. ಮಹಾತ್ಮ ಗಾಂಧೀಜಿ ಸೇರಿದಂತೆ ಹಲವರು ಇತರರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಮಾದರಿಯಾಗಿದ್ದಾರೆ. ಇಂತಹ ಕಾರ್ಯ ಹೆಚ್ಚೆಚ್ಚು ನಡೆಯಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹ್ತಾ, ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್ 190ನ ಚೇರ್‌ಮೆನ್ ಕಾಲಿನ್ ಪಿಂಟೊ ಉಪಸ್ಥಿತರಿದ್ದರು.
ಇದೇ ಸಂದರ್ಭ ವಿಶೇಷ ಸಾಮರ್ಥ್ಯದ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸಿದವರನ್ನು ಅಭಿನಂದಿಸಲಾಯಿತು.
ನೀಲ್ ರೋಡಿಗ್ರಸ್ ಪ್ರಸ್ತಾವನೆಗೈದರು. ಜಯರಾಜ್ ವಂದಿಸಿದರು. ಸಬಿತಾ ಕಾರ್ಯಕ್ರಮ ನಿರೂಪಿಸಿದರು.