ಸಿ.ಎ. ಉತ್ತೀರ್ಣರಾದ ಚರಣ್‌ರಾಜ್
Update: 2016-01-31 12:01 IST
ಕಟೀಲು, ಜ.30: ಹೊಸದಿಲ್ಲಿಯ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯು ನವೆಂಬರ್‌ನಲ್ಲಿ ನಡೆಸಿದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಮುಚ್ಚೂರು ನಿವಾಸಿ ಚರಣ್‌ರಾಜ್ ಉತ್ತೀರ್ಣರಾಗಿದ್ದಾರೆ. ಇವರು ವಾಸು ಶೆಟ್ಟಿಗಾರ್ ಹಾಗೂ ಶ್ರೀಮತಿ ಯಶೋಧ ದಂಪತಿಯ ಪುತ್ರ. ಅಲ್ಲದೆ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಹಳೆವಿದ್ಯಾರ್ಥಿಯಾಗಿರುತ್ತಾರೆ.