ಪುನರೂರು ಸರಕಾರಿ ಶಾಲೆಗೆ ರೋಟರಾಕ್ಟ್ ಕ್ಲಬ್ ವತಿಯಿಂದ ಶೌಚಾಲಯ ಕೊಡುಗೆ
ಕಿನ್ನಿಗೋಳಿ, ಜ.31: ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ವತಿಯಿಂದ ಸುಮಾರು 1 ಲಕ್ಷ ರೂ. ವೆಚ್ಚದ ನೂತನ ನಿರ್ಮಿಸಲಾದ ಶೌಚಾಲಯವನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸಿ ಪುನರೂರು ಭಾರತ ಮಾತಾ ಸರಕಾರಿ ಶಾಲೆಗೆ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಹರಿಕೃಷ್ಣ ಪುನರೂರು, ಈ ಶಾಲೆಯಲ್ಲಿ ಕಲಿಕೆ, ಕ್ರೀಡಾ ಚಟುವಟಿಕೆಗಳು ಉತ್ತಮವಾಗಿದ್ದರೂ ವಿದ್ಯಾರ್ಥಿಗಳಿಗೆ ಉತ್ತಮ ಶೌಚಾಲಯ ಇರಲಿಲ್ಲ. ಸರಕಾರಿ, ಅನುದಾನಿತ ಸರಕಾರಿ ಶಾಲೆಗಳನ್ನು ಗುರುತಿಸಿ ಇಂತಹಾ ಉತ್ತಮ ಸಮಾಜ ಮುಖಿ ಕೆಲಸಗಳಲ್ಲಿ ನಿರತರಾಗಿರುವ ಕಿನ್ನಿಗೋಳಿ ರೋಟರಾಕ್ಟ್ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದು ಶ್ಲಾಘಿಸಿದರು.
ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಶಾಲೆಯ ಸಂಚಾಲಕ ವಿನೋದ್ ನಾಥ ಐಕಳ, ಕಿನ್ನಿಗೋಳಿ ರೋಟರಾಕ್ಟ್ ಅಧ್ಯಕ್ಷ ಜಾಕ್ಸನ್ ಸಾಲ್ಡಾನಾ, ಕಾರ್ಯದರ್ಶಿ ವಿಜೇತ್ ಸಿಕ್ವೇರಾ, ಶಾಲೆಯ ಪ್ರಾಂಶುಪಾಲ ರಾಘವೇಂದ್ರ ರಾವ್, ಅದ್ಯಾಪಕಿ ಲತಾ ಹಾಗೂ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.