ಹದಿನೈದನೆ ಜನ್ಮದಿನ ಆಚರಿಸಿ ಜಗತ್ತಿನಲ್ಲಿ ವಿಸ್ಮಯ ಸೃಷ್ಟಿಸಿದ್ದಾನೆ ಈತ !

Update: 2016-01-31 09:20 GMT

ಮುಂಬೈ: ಶರೀರಕ್ಕೆ ಮಾತ್ರ ವಯಸ್ಸಾಗಿರುವುದು ಮನಸಿಗೆ ವಯಸ್ಸಾಗಿಲ್ಲ ಎಂದು ಕೆಲವು ಹಿರಿಯರು ಹೇಳುವುದನ್ನು ನೀವು ಕೇಳಿಸಿಕೊಂಡಿರುತ್ತೀರಿ. ಆದರೆ ಮುಂಬೈಯ ನಿಹಾಲ್ ಬಟ್ಲಾ ಎಂಬ 15 ವರ್ಷದ ಬಾಲಕನ ಶರೀರಕ್ಕೆ ಎಂಟು ಪಟ್ಟು ವಯಸ್ಸಾದ ಅವಸ್ಥೆಯಾಗಿದೆ. ವಯಸ್ಸಾದವರಿಗೆ ಮಾತ್ರ ಬರುವ ರೋಗಗಳು ಇವನನ್ನು ಬಾಧಿಸಿದ್ದು ಅಕಾಲ ಮುದಿತನಕ್ಕೊಳಗಾಗಿ ಸಂಕಷ್ಟ ಅನುಭವಿಸುತ್ತಿದ್ದಾನೆ. ಈಗ ಆತ ಹದಿನೈದನೆ ಜನ್ಮದಿನವನ್ನಾಚರಿಸಿದ್ದು ಅದರ ಮೂಲಕ ನಿಹಾಲ್‌ನ ಬರ್ತ್‌ಡೇ ಜಗತ್ತಿನ ಎಲ್ಲರೂ ಆಚರಣೆಯಾಗಿ ಪರಿಣಮಿಸಿತು.

    ಮುಂಬೈಯ ಬಾಂದ್ರದಲ್ಲಿ ವಾಸವಿರುವ ನಿಹಾಲ್‌ನಿಗೆ ಹಚ್ಚಿನ್‌ಸಾಂಗಿಲ್‌ಫೋರ್ಡ್ ಪ್ರೋಗೇರಿಯ ಸಿಂಡ್ರೋಮ್ (ಎಚ್‌ಜಿಪಿಸಿ)ರೋಗ ಬಾಧಿಸಿದ್ದು ಸಾಧಾರಣ ನೆಲೆಯಲ್ಲಿ ವಯಸ್ಸಿರುವುದಕ್ಕಿಂತ ಎಂಟು ಪಟ್ಟು ವೇಗದಲ್ಲಿ ಈ ರೋಗ ವು ಮುದಿಯನನ್ನಾಗಿಸುತ್ತದೆ. ಇದರಿಂದಾಗಿ ಅವನಿಗೆ ತೀರ ಬಳಲಿಕೆ ಯಾಗುತ್ತಿದೆ. ಈ ರೋಗ ಪೀಡಿತರು ಹದಿನಾಲ್ಕು ವಯಸ್ಸಿಗಿಂತ ಹೆಚ್ಚು ಸಮಯ ಬದುಕುವುದಿಲ್ಲ ಆದರೆ ನಿಹಾಲ್ ಹದಿನೈದನೇ ಜನ್ಮದಿನವವನು ಆಚರಿಸಿಕೊಂಡಿದ್ದಾನೆ. ಇಂತಹ ರೋಗಿಗಳು ಹೃದಯಕ್ಕಾಗುವ ತೊಂದರೆಯಿಂದ ಮೃತರಾಗುವರು. ರೋಗದಿಂದಾಗಿ ಇಂತಹವರ ಧಮನಿಗಳು ಅಕಾಲಿಕವಾಗಿ ಸಂಕುಚನಗೊಳ್ಳುತ್ತವೆ. ಸಾಮಾನ್ಯವಾಗಿ ಇಂತಹ ಕಷ್ಟಗಳು ಮನುಷ್ಯರಿಗೆ ಅರುವತ್ತು ವರ್ಷದ ನಂತರ ಬಾಧಿಸುತ್ತವೆ. ಆದರೆ ಈ ರೀತಿಯ ಎಲ್ಲ ಸವಾಲುಗಳನ್ನು ಯಶಸ್ವಿಯಾಗಿ ದಾಟಿ ಕಳೆದ ಜನವರಿ 20ಕ್ಕೆ ಜನ್ಮದಿನ ಆಚರಿಸಿಕೊಂಡಿದ್ದಾನೆ.

ನಿಹಾಲನಿಗೆ ಅದು ಹದಿನೈದನೇ ಜನ್ಮದಿನಾಚರಣೆಯಾಗಿದೆ. ಅವನೀಗ ಈ ರೋಗ ಬಾಧಿಸಿ ಭಾರತದಲ್ಲಿರುವವರಲ್ಲಿ ಅತೀಹೆಚ್ಚು ವಯಸ್ಸಿನ ಬಾಲಕ ಆಗಿದ್ದಾನೆ. ರೋಗದಿಂದಾಗಿ ಅನೇಕ ರೀತಿಯ ತೊಂದರೆ ಎದುರಿಸುತ್ತಿದ್ದರೂ ನಿಹಾಲ್ ತನ್ನಭವಿಷ್ಯದ ಬಗ್ಗೆ ಆಶಾವಾದಿಯಾಗಿದ್ದಾನೆ. ತನ್ನ ರೋಗ ತನಗೆ ದೇವನಿಂದ ಸಿಕ್ಕಿರುವ ವರದಾನವೆಂದು ಅವನು ಹೇಳಿಕೊಳ್ಳುತ್ತಿದ್ದಾನೆ. ಇದರಿಂದಾಗಿ ಅಲ್ಲವೇ ತಾನೊಬ್ಬ ವಿಶೇಷ ಬಾಲಕನಾಗಿರುವುದು ಎಂದು ಅವನ ಅನಿಸಿಕೆಯಾಗಿದೆ. ಕೇವಲ12.5 ಕಿಲೋಗ್ರಾಂ ತೂಕ ಮತ್ತು 12ಮೀಟರ್ ಉದ್ದ ಅವನದ್ದಾಗಿದೆ.

ವರ್ಷಗಳು ಕಳೆದಂತೆ ನಿಹಾಲ್‌ನ ಮನಸು ಮಕ್ಕಳಂತಾದರೆ ದೇಹ ಮುದುಕರಂತಾಗುತ್ತಿದೆ. ಸಹಪಾಠಿಗಳು ತಮಾಶೆ ಮಾಡುವುದರಿಂದಾಗಿ ಅವನು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾನೆ. ಸಹಪಾಠಿಗಳು ನಿಹಾಲ್‌ನನ್ನು ಓರೋಎಂದು ತಮಾಶೆ ಮಾಡುತ್ತಿದ್ದರು. ಫಾ ಎಂಬ ಸಿನೆಮಾದಲ್ಲಿ ಅಮಿತಾಬ್ ಬಚ್ಚನ್ ಮಾಡಿದ ಪಾತ್ರದ ಹೆಸರು ಓರೋ ಆಗಿತ್ತು. ಓರೋ ಹಾರ್ಟ್ ಅಟ್ಯಾಕ್‌ನಿಂದ ಸಾಯುವಂತೆ ನಿಹಾಲ್ ಸಾಯುವನೆಂದು ಒಬ್ಬ ಸಹಪಾಠಿ ಹೇಳಿದ್ದರಿಂದ ನಿಹಾಲ್ ತುಂಬ ನೊಂದುಕೊಂಡಿದ್ದ. ಕಳೆದ ಡಿಸೆಂಬರ್‌ನಲ್ಲಿ ನಿಹಾಲ್‌ನನ್ನು ಬೋಸ್ಟನ್‌ನ ಪ್ರೋಗೇರಿಯಾ ರಿಸರ್ಚ್ ಸೆಂಟರ್ ಕರೆದುಕೊಂಡು ಹೋಗಲಾಗಿತ್ತು. ಇಲ್ಲಿ ಅವನನ್ನು ತಪಾಸಣೆಗೊಳಪಡಿಸಲಾಗಿತ್ತು. ಇಲ್ಲಿ ಒಂದು ಕ್ಯಾನ್ಸರ್ ಮದ್ದು ನೀಡಲಾಗಿತ್ತು.

ಅದರಿಂದಾಗಿ ನಿಹಾಲ್‌ನಿಗೆ ವಯಸ್ಸು ಹೆಚ್ಚಾಗುವುದರ ವೇಗವು ಕಡಿಮೆಗೊಳ್ಳಲಿದೆ ಎಂದು ತಿಳಿಸಲಾಗಿದೆ ಈ ರೋಗ 200ರಿಂದ 250 ಮಕ್ಕಳಲ್ಲಿ ಒಬ್ಬರಿಗೆ ಮಾತ್ರ ತಗಲುವುದು ಎನ್ನಲಾಗಿದೆ. ಹದಿನೆಂಟು ತಿಂಗಳವರೆಗೆ ಅವನು ಸಾಮಾನ್ಯ ಮಗು ಆಗಿದ್ದ. ಆನಂತರ ಅವನಲ್ಲಿ ಈ ರೋಗಲಕ್ಷಣಗಳು ಕಾಣಿಸಿಕೊಂಡಿದ್ದವು. ಸಣ್ಣ ಅಂಗಡಿ ಇಟ್ಟು ಮೊಬೈಲ್ ಫೋನ್ ರಿಪೇರಿ ಮಾಡುವ ಶೀನಿವಾಸ್ ಅವನತಂದೆಯಾಗಿದ್ದರೆ. ಅವರು ತನ್ನ ಮಗ ತೀಕ್ಷ್ಣ ರೋಗ ತಗಲಿರುವ ಭಾರತೀಯ ಬಾಲಕ ಎಂದು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News