×
Ad

ಉಪ್ಪಳದಲ್ಲಿ ಹೈಸ್ಕೂಲ್ ಸಮೀಪ ಮದ್ಯಮಾರಾಟ ಕೇಂದ್ರ

Update: 2016-01-31 16:04 IST

ಉಪ್ಪಳ: ಉಪ್ಪಳದಲ್ಲಿ ಶಾಲೆಯೊಂದರ ಸಮೀಪ ಮದ್ಯ ಮಾರಾಟ ನಡೆಯುತ್ತಿದೆ ಎಂದು ದೂರಲಾಗಿದೆ. ಉಪ್ಪಳ ಸರಕಾರಿ ಹೈಸ್ಕೂಲ್ ಸಮೀಪದಲ್ಲಿ ಮದ್ಯಮಾರಾಟ ನಡೆಯುತ್ತಿದ್ದು ಸಂಜೆಯ ವೇಳೆ ಮದ್ಯಪಾನಿಗಳು ಸ್ಕೂಲಿನ ವರಾಂಡಕ್ಕೆ ಬಂದು ಮದ್ಯ ಸೇವಿಸುತ್ತಿರುವುದಾಗಿ ಆರೋಪಿಸಲಾಗಿದೆ. ಮದ್ಯದ ಖಾಲಿ ಬಾಟ್ಲಿಗಳನ್ನು ಮದ್ಯಪಾನಿಗಳು ಹೈಸ್ಕೂಲ್ ಕಂಪೌಂಡ್‌ನೊಳಗೆ ಎಸೆಯುತ್ತಿದ್ದಾರೆ. ಮಂಗಳೂರಿನಿಂದ ಕಡಿಮೆಬೆಲೆಯ ಮದ್ಯವನ್ನು ತಂದು ಇಲ್ಲಿ ಕೆಲವರು ವ್ಯಾಪಾರ ನಡೆಸುತ್ತಿದ್ದಾರೆನ್ನಲಾಗಿದೆ. ಇದರ ಕುರಿತು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರೂ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಊರವರು ಹೇಳುತ್ತಿದ್ದಾರೆ. ಅವರೀಗ ಸಹಿ ಸಂಗ್ರಹಿಸಿ ಗೃಹಸಚಿವರು ಮತುಉನ್ನತ ಅಧಿಕಾರಿಗಳಿಗೆ ದೂರು ನೀಡುವ ಸಿದ್ಧತೆ ನಡೆಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News