×
Ad

ತಾಪಂ-ಜಿಪಂ ಚುನಾವಣೆಗೆ ಸಿದ್ಧತೆ: ಸುಳ್ಯ ತಾಲೂಕು ಕಚೇರಿಯಲ್ಲಿ ಪೂರ್ವಭಾವಿ ಸಭೆ

Update: 2016-01-31 16:12 IST

ಸುಳ್ಯ, ಜ.31: ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೆ ಪೂರ್ವಭಾವಿಯಾಗಿ ರಾಜಕೀಯ ಪಕ್ಷಗಳ ಮುಖಂಡರ ಸಭೆಯು ಸುಳ್ಯ ತಾಲೂಕು ಕಚೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಅನಂತಶಂಕರ್, ಸುಳ್ಯ ತಾಲೂಕಿನಲ್ಲಿ 112 ಮತಗಟ್ಟೆಗಳಿದ್ದು, ಈ ಪೈಕಿ 45 ಸೂಕ್ಷ್ಮ ಮತ್ತು 25 ಅತಿ ಸೂಕ್ಷ್ಮ ಮತಗಟ್ಟೆಗಳಾಗಿವೆ. ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಕಾರ್ಯಕ್ರಮ ಆಯೋಜಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆದುಕೊಳ್ಳಬೇಕು. ಶಾಂತಿಯುತ ಚುನಾವಣೆಗೆ ಸಹಾಕರ ನೀಡಬೇಕು ಎಂದು ತಹಶೀಲ್ದಾರ್ ವಿನಂತಿಸಿದರು. ಜಿಲ್ಲಾ ಪಂಚಾಯತ್ ಚುನಾವಣಾಧಿಕಾರಿಯಾಗಿ ಅರುಣಾ ಪ್ರಭ, ಸಹಾಯಕ ಚುನಾವಣಾಧಿಕಾರಿಯಾಗಿ ಚಂದ್ರಶೇಖರ ಪೇರಾಲು, ತಾಲೂಕು ಪಂಚಾಯತ್ ಚುನಾವಣಾಧಿಕಾರಿಯಾಗಿ ಅನಂತ ಶಂಕರ್, ಸಹಾಯಕ ಚುನಾವಣಾಧಿಕಾರಿಯಾಗಿ ಕೆಂಪ ಲಿಂಗಪ್ಪಸಹಕರಿಸಲಿದ್ದಾರೆ ಎಂದವರು ತಿಳಿಸಿದರು.

ಬಿಜೆಪಿ ಪ್ರತಿನಿಧಿ ಉಮೇಶ್ ವಾಗ್ಲೆ, ಕಾಂಗ್ರೆಸ್ ಪ್ರತಿನಿಧಿಗಳಾದ ಪಿ.ಎಸ್.ಗಂಗಾಧರ್, ಸತ್ಯಕುಮಾರ್ ಆಡಿಂಜ, ಧರ್ಮಪಾಲ ಕೊಯಿಂಗಾಜೆ, ಜೆಡಿಎಸ್ ಪ್ರತಿನಿಧಿ ರೋಹನ್ ಪೀಟರ್, ಸಿಪಿಎಂ ಪ್ರತಿನಿಧಿ ರಾಬರ್ಟ್ ಡಿಸೋಜ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News