×
Ad

ಮಂಗಳೂರು : :ಸುನ್ನೀ ಸ್ಟೂಡೆಂಟ್ ಫೆಡರೇಶನ್ ಉಳ್ಳಾಲ ವತಿಯಿಂದ ತಾಜುಲ್ ಉಲಮಾ ಅನುಸ್ಮರಣೆ , ಬೃಹತ್ ಬುರ್ದಾ ಮಜ್ಲಿಸ್

Update: 2016-01-31 17:07 IST

   ಮಂಗಳೂರು,ಜ.31:ಸುನ್ನೀ ಸ್ಟೂಡೆಂಟ್ ಫೆಡರೇಶನ್‌ನ ಉಳ್ಳಾಲ ಮೇಲಂಗಡಿ ಶಾಖೆಯ ವತಿಯಿಂದ ಫೆ.2 ರಿಂದ 7 ರವರೆಗೆ ಮೇಲಂಗಡಿ ಉಳ್ಳಾಲ ದರ್ಗಾ ಬಳಿಯ ತಾಜುಲ್ ಉಲಮ ನಗರದಲ್ಲಿ ತಾಜುಲ್ ಉಲಮಾ ಅನುಸ್ಮರಣೆ , ಬೃಹತ್ ಬುರ್ದಾ ಮಜ್ಲಿಸ್ ಮತ್ತು ಮುಹಿಯದ್ದೀನ್ ಮಾಲೆ ಆಲಾಪನೆ ಹಾಗೂ ಮತ ಪ್ರಭಾಷಣವನ್ನು ಆಯೋಜಿಸಲಾಗಿದೆ. ಉಳ್ಳಾಲ ಖಾಝಿ ಅಸ್ಸಯಿದ್ ಹಾಮಿದ್ ಝಲ್ ಕೋಯಮ್ಮ ತಂಳ್ ಅಲ್ ಬುಖಾರಿಯವರು ದುವಾಶೀರ್ವಚನ ಮಾಡಲಿದ್ದಾರೆ.

  ಫೆ.2 ರಂದು ಮಗ್ರಿಬ್ ನಮಾಝಿನ ಬಳಿಕ ನಡೆಯುವ ಸಮಾರಂಭವನ್ನು ಉಳ್ಳಾಲ ಕೇಂದ್ರ ಜುಮಾ ಮಸೀದಿ ಖತೀಬರಾದ ಅಬ್ದುರ್ರವೂಫ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಉಳ್ಳಾಲ ಎಸ್.ಎಂ.ಎ ಕಾಲೇಜಿನ ಅಸ್ಸಯ್ಯಿದ್ ಚೆರುಕುಂ ತಂಳ್ ದುಆ ನೆರವೇರಿಸಲಿದ್ದಾರೆ. ಮಳ್‌ಹರ್ ದಅವಾ ಕಾಲೇಜಿನ ಪ್ರೊಫೆಸರ್ ಅನಸ್ ಸಿದ್ದೀಖಿ ಅಲ್ ಕಾಮಿಲ್ ಸಖಾಫಿ ಶಿರಿಯಾ ಇಸ್ಲಾಮಿನಲ್ಲಿ ಯುವಕರು ಮತ್ತುನ ಯುವತಿಯರು ಎಂಬ ವಿಷಯದಲ್ಲಿ ಮುಖ್ಯ ಭಾಷಣಗೈಯಲಿದ್ದಾರೆ.

ಫೆ.3 ರಂದು ನಡೆಯುವ ಕಾರ್ಯಕ್ರಮವನ್ನು ಮಗ್ರಿಬ್ ನಮಾಝಿನ ಬಳಿಕ ಸುಂದರ್‌ಭಾಗ್‌ನ ಖತೀಬರಾದ ಮುಹಮ್ಮದ್ ಶರೀಫ್ ಸಅದಿ ದುವಾ ನೆರವೇರಿಸಿ ಉದ್ಘಾಟಿಸಲಿದ್ದಾರೆ. ಕೇರಳದ ಮಲಪ್ಪುರಂನ ಸಿ.ಕೆ. ರಾಶಿದ್ ಅಲ್ ಬುಖಾರಿ ಅವರು ಅಹ್ಲ್ ಸುನ್ನತ್ ವಲ್ ಜಮಾಅತ್ ವಿಷಯದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ.

ಫೆ.4 ರಂದು ನಡೆಯುವ ಕಾರ್ಯಕ್ರಮದಲ್ಲಿ ಉಳ್ಳಾಲ ಖಾಝಿ ಅಸ್ಸಯ್ಯಿದ್ ಝಲ್ ಕೋಯಮ್ಮ ತಂಳ್ ದುವಾ ನೆರವೇರಿಸಲಿದ್ದಾರೆ.ಉಳ್ಳಾಲ ದಅವಾ ಕಾಲೇಜ್‌ನ ಪ್ರೊಪೇಸರ್ ಅಬ್ದುಲ್ ಕಲಾಂ ಅಝ್‌ಹರಿ ಉದ್ಭೋದನೆ ಮಾಡಲಿದ್ದಾರೆ. ಮುಹ್ಯಿದ್ದೀನ್ ಮಾಲೆ ಆಲಾಪನೆ ನಡೆಯಲಿದ್ದು ಕೇರಳ ಮಲಪ್ಪುರಂನ ಅಶ್ರ್ ಪೆರುಮುಗಂ ತಂಡ ಖುತುಬುಝ್ಝಮಾನ್ ಬುರ್ದಾ ಇಖ್‌ವಾನ್ ನೆರವೇರಿಸಲಿದ್ದಾರೆ. ಮಾಸ್ಟರ್ ಇಸ್ತಿಹಾಕ್ ತಂಡದಿಂದ ನಅತೇ ಶರೀಫ್ ನಡೆಯಲಿದೆ.

ಫೆ.5 ರಂದು ಮಗ್ರಿಬ್ ನಮಾಝಿನ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಉಳ್ಳಾಲ ಎಸ್ ಎಂ ಎಸ್ ಕಾಲೇಜಿನ ಪ್ರೊಫೆಸರ್ ಅಹ್ಮದ್ ಬಾವ ಮುಸ್ಲಿಯಾರ್ ದುವಾ ಮತ್ತ ಉದ್ಘಾಟನೆ ಮಾಡಲಿದ್ದಾರೆ. ವಾಮಂಜೂರು ಖತೀಬ್ ಅಬ್ದುಲ್ ಹಮೀದ್ ಫೈಝಿ ಬೆಂಗರೆ ಸಂತಾನ ಪರಿಪಾಲನೆ ವಿಷಯದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ.

ಫೆ.6ರಂದು ನಡೆಯುವ ಕಾರ್ಯಕ್ರಮದಲ್ಲಿ ಮಗ್ರಿಬ್ ನಮಾಝಿನ ಬಳಿಕ ಅಲೇಕಳ ಜುಮಾ ಮಸ್ಜಿದ್‌ನ ಖತೀಬ್ ಅಬೂ ಝಿಯಾದ್ ಪಟ್ಟಾಂಬಿ ಉಸ್ತಾದ್ ದುವಾ ನೆರವೇರಿಸಿ ಉದ್ಘಾಟನೆ ಮಾಡಲಿದ್ದಾರೆ. ಮರಣ ಮತ್ತು ಮರಣಾ ನಂತರ ಜೀವನ ವಿಷಯದಲ್ಲಿ ಅಬ್ಬಾಸ್ ಮದನಿ ಹೀರೆಬಂಡಾಡಿ ಭಾಷಣ ಮಾಡಲಿದ್ದಾರೆ.

ಫೆ.7ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ತಾಜುಲ್ ಉಲಮಾರ ಹಿರಿಯ ಪುತ್ರ ಅಸ್ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಳ್ ಮದನಿ ಅಲ್‌ಬುಖಾರಿ ದುವಾ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಸಯ್ಯಿದ್‌ಮದನಿ ದರ್ಗಾದ ಅಧ್ಯಕ್ಷ ಯು.ಎಸ್. ಹಂಝ ಹಾಜಿ ವಹಿಸಲಿದ್ದಾರೆ. ಉಳ್ಳಾಲ ಮಂಚಿಲ ಜುಮಾ ಮಸ್ಜಿದ್‌ನ ಖತೀಬರಾದ ಅಬ್ದುಲ್ ಜಬ್ಬಾರ್ ಅಶ್ರಫಿ ಉದ್ಭೋದನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್ ಸೇರಿದಂತೆ ಹಲವ ಗಣ್ಯರು ಭಾಗವಹಿಸಲಿದ್ದಾರೆ.

                                                                                        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News