ಕಾರ್ಕಳ; ಮುನಿಯಾಲು ಲಯನ್ಸ್ ಕ್ಲಬ್ ಸೇವೆ ಶ್ಲಾಘನೀಯ- ಶ್ರೀಧರ್ ಶೇಣವ,
ಕಾರ್ಕಳ ಗ್ರಾಮೀಣ ಜನರ ಆರೋಗ್ಯ ಕಾಪಾಡುವಲ್ಲಿ ವಿಶೇಷ ಶ್ರಮವಹಿಸುತ್ತಿರುವುದರೊಂದಿಗೆ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಮುನಿಯಾಲು ಲಯನ್ಸ್ ಕ್ಲಬ್ ಸೇವೆ ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಲಯನ್ಸ್ ಗವರ್ನರ್ ಶ್ರೀಧರ್ ಶೇಣವ ಹೇಳಿದರು.
ಅಶವರು ಜ.26ರಂದು ಮುನಿಯಾಲು ಲಯನ್ಸ್ ಕ್ಲಬ್‌ಗೆ ಅೀಕೃತ ಭೇಟಿ ನೀಡಿ ಮುನಿಯಾಲು ಕ್ಲಬ್ ವತಿಯಿಂದ ಕೊಡಮಾಡಿದ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾತಿಬೆಟ್ಟು ಗುರುನಾರಾಯಣ ಸಭಾ ಭವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕೊಡುಗೆಗಳನ್ನು ವಿತರಿಸಿ ಮಾತನಾಡಿದರು. ಕ್ಲಬ್ ವತಿಯಿಂದ ಸೋಲಾರ್ ಲೈಟ್, ಹೊಲಿಗೆ ಯಂತ್ರ, ವಿದ್ಯಾರ್ಥಿ ವೇತನ, ಬಡ ರೋಗಿಗಳಿಗೆ ಸಹಾಯಧನ, ಹೆಬ್ರಿಯ ಪ್ರಜ್ಞಾ ಅಶ್ರಮಕ್ಕೆ ಅಕ್ಕಿ, ಅಕ್ವಾಗಾರ್ಡ್ ಫಿಲ್ಟರ್ ವಿತರಣೆ, ಅಜೆಕಾರು ಜ್ಯೋತಿ ಹೈಸ್ಕೂಲ್‌ಗೆ ಕುಡಿಯುವ ನೀರಿನ ವ್ಯವಸ್ಥೆ, ಮುನಿಯಾಲು ಪೇಟೆಯ ಮಧ್ಯ ಭಾಗದಲ್ಲಿ ರೂ.40ಸಾವಿರ ವೆಚ್ಚದಲ್ಲಿ ನಿರ್ಮಾಣಗೊಂಡ 4ಎಲ್‌ಇಡಿ ಲೈಟ್‌ಗಳುಳ್ಳ ದೀಪ ಸ್ತಂಭ ಉದ್ಘಾಟನೆ, ಲಕ್ಷ್ಮೆ ಜನಾರ್ಧನ ಖಾಸಗಿ ಶಾಲೆ ಎಳ್ಳಾರೆ ಅಕ್ಷರ ದಾಸೋಹ ಕೊಠಡಿ ನಿರ್ಮಾಣಕ್ಕೆ ಧನ ಸಹಾಯ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ಡಾ ರಾಮಚಂದ್ರ ಐತಾಳ್ ಮತ್ತು ಅಹಮದ್ ಹುಸೇನ್ ಅವರನ್ನು ಸಮ್ಮಾನಿಸಲಾಯಿತು. ಮುನಿಯಾಲು ಕ್ಲಬ್ ಟಿ ಮಂಜುನಾಥ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.
ಸಮಾರಂಭದಲ್ಲಿ ಪ್ರಾಂತೀಯ ಅಧ್ಯಕ್ಷ ಸಂಜೀವ ಟಿ ಕರ್ಕೇರಾ, ಲಯನ್ಸ್ ವಲಾಯಧ್ಯಕ್ಷೆ ಜ್ಯೋತಿ ಪೈ,ಸಂಪುಟ ಕಾರ್ಯದರ್ಶಿ ವಿ.ಟಿ ಹೆಗ್ಡೆ, ಉಮೇಶ್ ಶೆಟ್ಟಿ .ಅಶೋಕ್ ಎಮ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮುನಿಯಾಲು ಲಯನ್ಸ್ ಕ್ಲಬ್‌ನ ಅಧ್ಯಕ್ಷ ಡಾಸುದರ್ಶನ್ ಹೆಬ್ಬಾರ್ ಸ್ವಾಗತಿಸಿ,ಶಂಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ,ಲಯನ್ಸ್ ಕಾರ್ಯದರ್ಶಿ ಗೋಪಿನಾಥ ಭಟ್ ವಂದಿಸಿದರು.