×
Ad

ರಶ್ಯ ; ಯುದ್ಧ ವಿಮಾನದಿಂದ ವಾಯು ಪ್ರದೇಶ ಉಲ್ಲಂಘನೆ

Update: 2016-01-31 21:03 IST

ಟರ್ಕಿಅಂಕಾರ, ಜ. 31: ಎಚ್ಚರಿಕೆಗಳ ಹೊರತಾಗಿಯೂ, ರಶ್ಯದ ಎಸ್‌ಯು-34 ಯುದ್ಧ ವಿಮಾನವೊಂದು ತನ್ನ ವಾಯು ಪ್ರದೇಶವನ್ನು ಉಲ್ಲಂಘಿಸಿದೆ ಎಂದು ಟರ್ಕಿ ಶನಿವಾರ ಆರೋಪಿಸಿದೆ ಹಾಗೂ ಇದರ ಪರಿಣಾಮವನ್ನು ರಶ್ಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.ಆದರೆ, ತಾನು ಟರ್ಕಿಯ ವಾಯು ಪ್ರದೇಶವನ್ನು ಉಲ್ಲಂಘಿಸಿಲ್ಲ ಎಂದು ರಶ್ಯ ಹೇಳಿದೆ.ನವೆಂಬರ್‌ನಲ್ಲಿ ನಡೆದ ಇಂಥದೇ ಘಟನೆಯೊಂದರಲ್ಲಿ, ಸಿರಿಯದಲ್ಲಿ ಹಾರಾಟ ನಡೆಸುತ್ತಿದ್ದ ರಶ್ಯದ ಯುದ್ಧ ವಿಮಾನವೊಂದನ್ನು ಟರ್ಕಿ ಹೊಡೆದುರುಳಿಸಿತ್ತು. ಆ ವಿಮಾನ ತನ್ನ ವಾಯು ಪ್ರದೇಶವನ್ನು ಉಲ್ಲಂಘಿಸಿತ್ತು ಎಂದು ಟರ್ಕಿ ಹೇಳಿತ್ತು. ಇದು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಮರಕ್ಕೆ ಕಾರಣವಾಗಿತ್ತು ಹಾಗೂ ಅಂತಿಮವಾಗಿ ರಶ್ಯ ಟರ್ಕಿ ವಿರುದ್ಧ ಆರ್ಥಿಕ ದಿಗ್ಬಂಧನೆಗಳನ್ನು ವಿಧಿಸಿತ್ತು.

ಸಿರಿಯ: ಅವಳಿ ಸ್ಫೋಟದಲ್ಲಿ 45 ಸಾವು ಡಮಾಸ್ಕಸ್, 

ಜ. 31: ಸಿರಿಯದ ರಾಜಧಾನಿ ಡಮಾಸ್ಕಸ್‌ನ ದಕ್ಷಿಣದ ಸಯ್ಯಿದಾ ಝೈನಾಬ್ ಜಿಲ್ಲೆಯಲ್ಲಿ ರವಿವಾರ ನಡೆದ ಅವಳಿ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 45 ಮಂದಿ ಮೃತಪಟ್ಟಿದ್ದಾರೆ ಹಾಗೂ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೊದಲು ಆತ್ಮಹತ್ಯಾ ಕಾರ್ ಬಾಂಬ್ ಸ್ಫೋಟವೊಂದು ನಡೆಯಿತು. ಸ್ಫೋಟ ನಡೆದ ಸ್ಥಳದಲ್ಲಿ ಜನರು ಜಮಾಯಿಸಿದಾಗ ಅವರ ನಡುವೆ ಇನ್ನೊಬ್ಬ ಆತ್ಮಹತ್ಯಾ ಬಾಂಬರ್ ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ಸ್ಫೋಟಕಗಳನ್ನು ಸ್ಫೋಟಿಸಿದನು.

ಚೀನಾ: 2015ರಲ್ಲಿ 28 ಲಕ್ಷ ಕ್ಯಾನ್ಸರ್‌ಗೆ ಬಲಿಬೀಜಿಂಗ್,

ಜ. 31: ಚೀನಾದಲ್ಲಿ 2015ರಲ್ಲಿ ಸುಮಾರು 28 ಲಕ್ಷ ಮಂದಿ ಅಥವಾ ಪ್ರತಿ ದಿನ 7,500ಕ್ಕೂ ಅಧಿಕ ಮಂದಿ ಕ್ಯಾನ್ಸರ್‌ನಿಂದ ಸತ್ತಿರಬಹುದು ಎಂದು ನೂತನ ಅಧ್ಯಯನವೊಂದು ತಿಳಿಸಿದೆ.ಅದೂ ಅಲ್ಲದೆ, 2015ರಲ್ಲಿ 43 ಲಕ್ಷ ಕ್ಯಾನ್ಸರ್ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News