×
Ad

ಕೊಣಾಜೆ: ಕಳವು ಪ್ರಕರಣ - ಆರೋಪಿಗಳ ಸೆರೆ

Update: 2016-01-31 22:26 IST

ಕೊಣಾಜೆ: ಮಂಜನಾಡಿ ಗ್ರಾಮದ ಕಲ್ಕಟ್ಟದಲ್ಲಿ ಅಂಗಡಿಗಳಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಲ್ಕಟ್ಟ ಬದ್ರಿಯಾ ನಗರ ನಿವಾಸಿ ಮಹಮ್ಮದ್ ಅಬ್ದುಲ್ ಫಯಾನ್ ಯಾನೆ ಫಯ ಹಾಗೂ ಹರೇಕಳ ರಾಜಗುಡ್ಡೆ ನಿವಾಸಿ ಕಲಂದರ್ ಯಾನೆ ಮೋಂಟ ಬಂಧಿತರು.

ಶನಿವಾರ ರಾತ್ರಿ ಕಲ್ಕಟ್ಟದಲ್ಲಿರುವ ಎರಡು ಅಂಗಡಿಗಳಲ್ಲಿ ಕಳ್ಳತನ ನಡೆದಿತ್ತು. ಪ್ರಕರಣದಲ್ಲಿನ ಆರೋಪಿಗಳ ಬಗ್ಗೆ ಸ್ಥಳೀಯರು ವ್ಯಕ್ತಪಡಿಸಿದ ಸಂಶಯದ ಆಧಾರದಲ್ಲಿ ಚುರುಕಿನ ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿ ಫಯಾನ್ ವಿರುದ್ಧ ಈಗಾಗಲೇ ಉಳ್ಳಾಲ ಠಾಣೆಯಲ್ಲಿ ಬೆದರಿಕೆ ಪ್ರಕರಣ ಇದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News