ಬ್ರಿಟನ್ನಲ್ಲಿ ಶಿಲುಬೆ ಜಾಥಾ: ಐಸಿಸ್ ಕುರಿತು ಬೆದರಿಕೆಯೊಡ್ಡಲು ಜನಾಂಗೀಯವಾದಿಗಳ ಸಂಚು
ಲಂಡನ್: ಮುಸ್ಲಿವರು ಬಹುಸಂಖ್ಯಾತರಾಗಿರುವ ಇಂಗ್ಲೆಂಡ್‌ನ ಬ್ರೂಟನ್‌ನಲ್ಲಿ ಬ್ರಿಟನ್ ಫೆಸ್ಟ್ ಎಂಬ ಬಲಪಂಥೀಯ ಸಂಘಟನೆಯೊಂದು ನಡೆಸಿದ ಶಿಲುಬೆ ಜಾಥಾ ಮತ್ತು ಅದರೊಂದಿಗೆ ಆ ಪ್ರದೇಶದ ಮುಸ್ಲಿಮರು ನಿಷ್ಠುರವಾಗಿ ವರ್ತಿಸಿರುವುದು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚು ಚರ್ಚೆಗೊಳಗಾಗುತ್ತಿದೆ.ಆದರೆ ಈ ಶಿಲುಬೆ ಜಾಥಾ ಬ್ರಿಟನ್‌ನಲ್ಲಿ ಐಸಿಸ್ ಸರಕಾರ ಬರಲಿದೆಯೆಂದು ಹೆದರಿಸುವ ಉದ್ದೇಶದಿಂದ ಜನಾಂಗೀಯ ವಾದಿಗಳು ಹಮ್ಮಿಕೊಂಡಿದ್ದ ವಂಚನೆಯಾಗಿತ್ತೆಂದು ಇದೀಗ ಬಹಿರಂಗೊಂಡಿದೆ. ಶಿಲುಬೆ ಹಿಡಿದುಕೊಂಡು ಜಾಥಾದಲ್ಲಿ ಹೋಗುತ್ತಿದ್ದ ಯುವತಿಯೊಬ್ಬಳು ಪ್ರವಾದಿಯನ್ನು(ಸ) ಬೈದದ್ದು ಇಲ್ಲಿನ ಮುಸ್ಲಿಮರು ಕುಪಿತಗೊಳ್ಳಲು ಕಾರಣವಾಗಿತ್ತೆಂದು ಹೊಸ ವರದಿಗಳು ತಿಳಿಸಿವೆ. ಲೂಟನ್‌ನ ಬರಿಪಾರ್ಕ್ ಪ್ರದೇಶದಲ್ಲಿ ನಮ್ಮ ಜಾಥಾದ ಮೇಲೆ ಅಲ್ಲಿನ ಮುಸ್ಲಿಮರು ಕ್ರೂರವಾಗಿ ಪ್ರತಿಕ್ರಿಯಿಸಿದರೆಂದು ಹೇಳಿ ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಬ್ರಿಟನ್ ಫೆಸ್ಟ್ ಹೊರಗೆ ಬಿಟ್ಟಿತ್ತು. ಸ್ವಲ್ಪವೇ ಸಮಯದಲ್ಲಿ ಇದನ್ನು ಜಗತ್ತಿನಾದ್ಯಂತ 10ಮಿಲಿಯನ್ ಮಂದಿ ನೋಡಿದ್ದರು. ಬ್ರಿಟನ್ ಫೆಸ್ಟ್ ಡೆಪ್ಯುಟಿ ಲೀಡರ್ ಜೇಯ್ ದ ಫ್ರಾನ್ಸನ್ ಜಾಥದಲ್ಲಿ ಶಿಲುಬೆ ಹಿಡಿದುಕೊಂಡು ನಡೆದಿದ್ದರು.
ಜಾಥಾ ಸಾಗುವಾಗ ಇಬ್ಬರು ಮಕ್ಕಳ ಜೊತೆ ಪರ್ದಾಧರಿಸಿ ನಿಂತಿದ್ದ ಮುಸ್ಲಿಮ್ ಮಹಿಳೆಯೊಬ್ಬಳು ಕಟು ಭಾಷೆಯಲ್ಲಿ ವಿರೋಧಿಸುವುದು ವೀಡಿಯೊದಲ್ಲಿ ಕಾಣಿಸಿಕೊಂಡಿತ್ತು. ಈ ಮಹಿಳೆಯೊಂದಿಗೆ ಫ್ರಾನ್ಸನ್ ವಾದಕ್ಕಿಳಿದಿರುವುದು ದೃಶ್ಯದಲ್ಲಿ ಗೋಚರಿಸುತ್ತಿತ್ತು. ಇದು ಕ್ರೈಸ್ತರಾಷ್ಟ್ರ ಎಂದು ಫ್ರಾನ್ಸನ್ ಆಗಾಗ ಹೇಳುತ್ತಿದ್ದಾರಾದರೂ ಮುಸ್ಲಿಮ್ ಮಹಿಳೆಯೂ ಅದಕ್ಕೆ ಪ್ರತಿಕ್ರಿಯಿಸುವುದು ಕಾಣಿಸುತ್ತಿತ್ತು. ಈ ಮಹಿಳೆ ಕೋಮುದ್ವೇಷ ಪ್ರಕಟಿಸಿ ಅತಿತೀವ್ರವಾಗಿ ಪ್ರತಿಕ್ರಿಯಿಸಿದ್ದಾಳೆಎಂ ರೀತಿಯಲ್ಲಿ ಬ್ರಿಟನ್ ಫೆಸ್ಟ್ ಪ್ರಚಾರ ನಡೆಸಿತ್ತು.
ಆದರೆ ಮುಸ್ಲಿಮ್ ಪುರುಷರಿಗೆ ಭಾವನೆಯನ್ನು ನಿಯಂತ್ರಿಸಲು ಆಗದಿರುವುದಕ್ಕಾಗಿ ಮಹಿಳೆಯರಿಗೆ ಪರ್ದಾಹಾಕಿಸುತ್ತಿದ್ದಾರೆ ಎಂದು ಫ್ರಾನ್ಸನ್ ಅಣಕಿಸಿದ್ದರಿಂದ ಪರ್ದಾ ಧರಿಸಿದ್ದ ಮಹಿಳೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ ಎಂಬ ನೈಜ ಸಂಗತಿ ಈಗ ವರದಿಯಾಗಿದೆ. ಅದೇ ರೀತಿ ಒಬ್ಬ ಶಾಪ್‌ಕೀಪರ್ ಜೇಯ್ ದಫ್ರಾನ್ಸನ್‌ರ ಜೊತೆ ಜಗಳಕ್ಕಿಳಿದ ದೃಶ್ಯಗಳು ವೀಡಿಯೊದಲ್ಲಿವೆ. ಪ್ರವಾದಿ ಮುಹಮ್ಮದ್‌ರು ಒಬ್ಬ ವಂಚಕ ಪ್ರವಾದಿ ಎಂದು ಕೆಟ್ಟದಾಗಿ ಟೀಕಿಸಿದ್ದಕ್ಕಾಗಿ ಶಾಪ್ ಕೀಪರ್ ಕೋಪಗೊಂಡಿದ್ದನೆಂದು ಈಗಿನ ವರದಿಗಳು ತಿಳಿಸುತ್ತಿವೆ. ಈರೀತಿ ಉದ್ದೇಶಪೂರ್ವಕವಾಗಿ ಜನಾಂಗೀಯ ಪ್ರಚೋದನೆಯನ್ನು ಬ್ರಿಟನ್ ಫೆಸ್ಟ್ ಮಾಡಿದೆ. ಮತ್ತು ಈ ವೀಡಿಯೊ ತೆಗೆದು ಮುಸ್ಲಿಮ್ ವಿರೋಧಿ ಭಾವನೆ ಸೃಷ್ಟಿಸುವ ಕೆಲಸವನ್ನು ಈ ಸಂಘಟನೆ ಮಾಡಿದೆ ವರದಿಗಳು ತಿಳಿಸಿವೆ.
ಬ್ರಿಟನ್ ಒಂದು ದಿವಸ ಮುಸ್ಲಿಮ್ ರಾಷ್ಟ್ರವಾಗಲಿದೆ ಹಾಗೂ ಬ್ರಿಟನ್ ಫೆಸ್ಟ್ ಕಾರ್ಯಕರ್ತರು ನಗರವನ್ನು ತೊರೆದು ಹೋಗಬೇಕೆಂದು ಇಲ್ಲಿನ ಮುಸ್ಲಿಮರು ಹೇಳಿದ್ದಾರೆಂಬುದಾಗಿ ಬ್ರಿಟನ್ ಫೆಸ್ಟ್ ಈ ಜಾಥಾದ ನಂತರ ಪ್ರಚಾರ ನಡೆಸಿತ್ತು. ಬರಿಪಾರ್ಕ್‌ನವನಾದ ಒಬ್ಬನನ್ನು ಲಂಡನ್‌ನ ಆಕ್ಸಫರ್ಡ್ ಸ್ಟ್ರೀಟ್‌ನಲ್ಲಿ ಒಂದು ಐಸಿಸ್ ಸ್ಟಾಲ್ ಹಾಕಿದ್ದಕ್ಕಾಗಿ ಬಂಧಿಸಲಾಗಿತ್ತು. ಬರಿಪಾರ್ಕ್ ಸಹಿತ ಲೂಟನ್‌ನಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ಪ್ರಬಲವಾಗಿದೆ ಎಂಬ ಸೂಚನೆ ಇದರಿಂದ ಲಭಿಸಿತ್ತು. ಆದುದರಿಂದ ಈ ಪ್ರದೇಶವನ್ನೇ ಬ್ರಿಟನ್ ಫೆಸ್ಟ್ ಆಯೋಜಕರು ಜಾಥಾ ನಡೆಸಲು ಆಯ್ಕೆ ಮಾಡಿಕೊಂಡಿದ್ದರು, ಇಲ್ಲಿ ಮುಸ್ಲಿಮ್ ಭಯೋತ್ಪಾದಕರಿದ್ದಾರೆಂದು ಬ್ರಿಟನ್‌ಫೆಸ್ಟ್ ಶಿಲುಬೆ ಜಾಥಾದ ನಂತರ ತನ್ನ ವೆಬ್‌ಸೈಟ್‌ನಲ್ಲಿ ಪ್ರಚಾರ ನಡೆಸಿತ್ತು. ಇಸ್ಲಾಮ್ ಧರ್ಮ ವಿಶ್ವಾಸಿಗಳೊಂದಿಗೆ ಘರ್ಷಣೆಗೆ ಕುಖ್ಯಾತವಾದ ಕುಪ್ರಸಿದ್ಧ ಸಂಘಟನೆ ಇದು. ಇವರು ಲಂಡನ್‌ನ ಬ್ರಿಕ್ ಲೇನ್‌ನಲ್ಲಿ ಪಾಟ್ರೋಲಿಂಗ್ ನಡೆಸಿ ಮುಸ್ಲಿಮ್ ಮಸೀದಿಗಳನ್ನು ಆಕ್ರಮಿಸಿದ್ದಾರೆ. ಮುಸ್ಲಿಮ್ ವಿದ್ವಾಂಸ ಅಂಜಂ ಚೌಧರಿಯನ್ನು ಅವರ ಈಸ್ಟ್‌ಲಂಡನ್‌ನ ಮನೆಯಲ್ಲಿ ಥಳಿಸಿದ್ದರು. ಆದರೆ ಇವರು ನಾವು ಜನಾಂಗೀಯ ಸಂಘಟನೆಯಲ್ಲವೆನ್ನುತ್ತಿದ್ದಾರಲ್ಲದೆ ಅಲ್ಪಸಂಖ್ಯಾತರು ಈಸಂಘಟನೆಯನ್ನು ಸೇರಲು ಕರೆ ನೀಡುತ್ತಿದ್ದಾರೆ.
ಬ್ರಿಟನ್‌ನಲ್ಲಿ ಮುಸ್ಲಿಮರು ಹೆಚ್ಚುತ್ತಿದ್ದಾರೆ ಜೊತೆಗೆ ಭಯೋತ್ಪಾದನೆಯೂ ಹೆಚ್ಚುತ್ತಿದೆ. ದಿನದಿಂದ ದಿನಕ್ಕೆ ಬ್ರಿಟನ್ ಮುಸ್ಲಿಮ್ ರಾಷ್ಟ್ರವಾಗುವತ್ತ ದಾಪುಕಾಲಿಕ್ಕುತ್ತಿದೆ ಎಂದು ಬಲಪಂಥೀಯ ಸಂಘಟನೆಯಾದ ಬ್ರಿಟನ್ ಫೆಸ್ಟ್ ಅಪಪ್ರಚಾರ ನಡೆಸುತ್ತಿದೆ. ನಮ್ಮ ಮುಂದಿನ ಗುರಿ ಬ್ರಿಟನ್ ಎಂದು ಐಸಿಸ್‌ನಂತಹ ಸಂಘಟನೆಗಳು ಘೋಷಿಸುತ್ತಿರುವುದು ಇವರ ವಾದಗತಿಗೆ ಪೂರಕವಾಗುತ್ತಿದೆ. ಬ್ರಿಟನ್ ಭಯೋತ್ಪಾದಕರಿಂದ ರಕ್ಷಿಸಬೇಕೆಂಬುದಕ್ಕಾಗಿ ಶಿಲುಬೆ ಜಾಥಾ ಹಮ್ಮಿಕೊಂಡಿದ್ದೇವೆ ಎಂದು ಬ್ರಿಟನ್ ಫೆಸ್ಟ್ ಹೇಳಿಕೊಂಡಿದೆ.