×
Ad

ಕಾಸರಗೋಡು : ಸರಣಿ ಅಪಘಾತ, ಮೂವರಿಗೆ ಗಾಯ .

Update: 2016-02-01 16:09 IST

ಕಾಸರಗೋಡು : ರಾಜ್ಯ ಹೆದ್ದಾರಿಯ ಚೆಮ್ನಾಡ್ ಬಳಿ ಸರಣಿ ಅಪಘಾತ ಸಂಭವಿಸಿದ್ದು , ಮೂವರು ಗಾಯಗೊಂಡ ಘಟನೆ ಸೋಮವಾರ ಅಪರಾಹ್ನ ನಡೆದಿದೆ.

ಕಾರು , ಬೈಕ್  ಮತ್ತು  ಟೆಂಪೋ  ನಡುವೆ  ಅಪಘಾತ ಸಂಭವಿಸಿದ್ದು, ಕಾರು ಮತ್ತು ಬೈಕ್  ನಜ್ಜು ಗುಜ್ಜಾಗಿದ್ದು , ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹೊಂಡಕ್ಕೆ ಉರುಳಿ ಬಿದ್ದಿದೆ.

ಟೆಂಪೋ ದಲ್ಲಿದ್ದ  ಇಬ್ಬರು ಮತ್ತು ಬೈಕ್ ಸವಾರ ಗಾಯಗೊಂಡಿದ್ದಾರೆ.  ಕಾಸರಗೋಡಿನಿಂದ ಚಳಿಯ೦ಗೋಡಿಗೆ  ತೆರಳುತ್ತಿದ್ದ  ಕಾರು  ನಿಯಂತ್ರಣ ತಪ್ಪಿ  ಡಿವೈಡರ್  ಮೇಲೆ ಹತ್ತಿದ ಬಳಿಕ  ಟೆಂಪೋಗೆ ಡಿಕ್ಕಿ ಹೊಡೆದಿದೆ . ಈ ಸಂದರ್ಭದಲ್ಲಿ ಬೈಕ್ ಎರಡು ವಾಹನಗಳೆಡೆಗೆ ಸಿಲುಕಿತ್ತು . ಅಪಘಾತದ  ಬಳಿಕ  ಹಲವು   ಸಮಯ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು. ಕಾಸರಗೋಡು  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News