×
Ad

ಕೊಂಚಾಡಿಯಲ್ಲಿ ಪೀಠೋಪಕರಣ ಕಾರ್ಖಾನೆಯಲ್ಲಿ ಬೆಂಕಿ ಅವಘಡ:ಲಕ್ಷಾಂತರ ರೂ. ನಷ್ಟ

Update: 2016-02-01 16:57 IST

ಮಂಗಳೂರು,ಫೆ.1: ನಗರದ ಕೊಂಚಾಡಿಯಲ್ಲಿ ಶಾಲೆಯೊಂದರ ಸನಿಹದಲ್ಲಿಯೆ ಇರುವ ಪೀಠೋಪಕರಣಗಳನ್ನು ತಯಾರಿಸುವ ಕಾರ್ಖಾನೆಯೊಂದರಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಅಂದಾಜು 5 ಲಕ್ಷ ರೂಗಳ ಸಾಮಗ್ರಿಗಳು ನಷ್ಟವಾಗಿದೆ.

 ಕೊಂಚಾಡಿಯಲ್ಲಿ ಇರುವ ಎಮಲ್ಡ್ ಡೆಕಾರ್ ಪೀಠೋಪಕರಣ ಅಂಗಡಿಯ ಮೇಲ್ಬಾಗದಲ್ಲಿ ತೆರೆದ ಮಾಳಿಗೆಯಲ್ಲಿ ಕಾರ್ಯಚರಿಸುತ್ತಿರುವ ಭಾಗ್ಯಜ್ಯೋತಿ ಇಂಡಸ್ಟ್ರಿಯಲ್ಲಿ ಮದ್ಯಾಹ್ನದ ವೇಳೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ.

ಬೆಂಕಿ ತಗುಲಿದ ಪರಿಣಾಮ 3 ಸೋಪಾಸೆಟ್, 2 ಟೇಬಲ್, ವಿದ್ಯುತ್ ತಂತಿ ಸುಟ್ಟು ಕರಕಲಾಗಿದ್ದು ಬೆಂಕಿಯ ಕೆನ್ನಾಲಗೆಗೆ ಮೇಲ್ಚಾವಣಿಗೆ ಹಾನಿಯಾಗಿದೆ.

ಕಾರ್ಖಾನೆಯಲ್ಲಿ ಸುಮಾರು 30 ಮಂದಿ ಕಾರ್ಮಿರು ದುಡಿಯುತ್ತಿದ್ದು ಬೆಂಕಿ ಬಿದ್ದ ಸಂದರ್ಭದಲ್ಲಿ ಹೊರಗಡೆ ಬಂದು ಪಾರಾಗಿದ್ದಾರೆ.

     ಅಗ್ನಿಶಾಮಕದಳದ ಕದ್ರಿಯ ಹತ್ತು ಸಿಬ್ಬಂದಿಗಳು ಮತ್ತು ಪಾಂಡೇಶ್ವರದ 7ಸಿಬ್ಬಂದಿಗಳು ಮೂರು ಅಗ್ನಿಶಾಮಕ ವಾಹನದಲ್ಲಿ ಅಗ್ನಿನಂದಿಸಲು ಕಾರ್ಯಾಚರಿಸಿದರು.

 ಕಾರ್ಖಾನೆಯು ಲಕ್ಷ್ಮಣ್ ದೇವಾಡಿಗ ಎಂಬವರಿಗೆ ಸೇರಿದ್ದು ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೆ ಕಾರ್ಖಾನೆ ಆರಂಭವಾಗಿತ್ತು. ಕಾವೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಕದ್ರಿ ಅಗ್ನಿಶಾಮಕದಳದ ಸಹಾಯಕ ಅಕಾರಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಬಂದ ತಕ್ಷಣವೆ ಕದ್ರಿ ಮತ್ತು ಪಾಂಡೇಶ್ವರ ಅಗ್ನಿಶಾಮಕದಳದ ಸಿಬ್ಬಂದಿಗಳು ಕಾರ್ಯಚರಿಸಿದ್ದು ಘಟನೆಯಲ್ಲಿ ಅಂದಾಜು 5 ಲಕ್ಷ ರೂಗಳ ಸಾಮಗ್ರಿ ನಷ್ಟವಾಗಿದೆ. ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂಬುದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ ಎಂದು ಹೇಳಿದರು.

ಶಾಲೆಯ ಸನಿಹದಲ್ಲಿಯೆ ಬೆಂಕಿ ಅವಘಡ:

ಈ ಕಾರ್ಖಾನೆಯ ಸನಿಹದಲ್ಲಿಯೆ ಎಲ್‌ಕೆಜಿಯಿಂದ ಹತ್ತನೆ ತರಗತಿಯವರೆಗೆ ಕಲಿಯುತ್ತಿರುವ 517 ಮಕ್ಕಳಿರುವ ವಿದ್ಯಾ ನರ್ಸರಿ ಸ್ಕೂಲ್ ಮತ್ತು ವಿದ್ಯಾ ಹೈಯರ್ ಪ್ರೈಮರಿ ಶಾಲೆಯಿದ್ದು ಶಾಲಾ ಮಕ್ಕಳು, ಶಿಕ್ಷಕರು,ಸಾರ್ವಜನಿಕರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಯಿತು. ಬೆಂಕಿ ಕಾಣಿಸಿಕೊಂಡ ಕಟ್ಟಡಕ್ಕೂ ಶಾಲಾ ಕಟ್ಟಡಕ್ಕೂ ಕೆಲವೆ ಮೀಟರ್‌ಗಳ ಅಂತರವಿದ್ದು ಬೆಂಕಿ ಶಾಲೆಗೂ ತಗುಲುವ ಆತಂಕ ಕಾಡಿತ್ತು. ಬೆಂಕಿ ಕಾಣಿಸಿಕೊಂಡ ತಕ್ಷಣ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಶಾಲೆಯಿಂದ ಹೊರಬಂದಿದ್ದಾರೆ. 517 ಮಕ್ಕಳು ಏಕಕಾಲದಲ್ಲಿ ಹೊರಬಂದಿದ್ದು ಕಾಲ್ತುಲಿತ ಸಂಭವಿಸುವ ಆತಂಕವೂ ಎದುರಾಗಿತ್ತು. ಮಕ್ಕಳು ಬೆಂಕಿ ಕಾಣಿಸಿಕೊಂಡ ಹೊರಬಂದ ಪರಿಣಾಮ ಮಕ್ಕಳ ಪುಸ್ತಕಗಳು, ಪಾದರಕ್ಷೆ, ಶಾಲಾಬ್ಯಾಗ್ ಶಾಲೆಯಲ್ಲಿಯೆ ಬಾಕಿಯಾಗಿತ್ತು. ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ ಪರಿಣಾಮ ಶಾಲೆಗೆ ಾವುದೆ ಅಪಾಯವಾಗುವುದು ತಪ್ಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News