×
Ad

ಕಾಸರಗೋಡು : ವ್ಯಕ್ತಿ ಮನೆಯಲ್ಲಿ ನಿಗೂಡ ಸಾವು, ಮೂರು ದಿನ ಬಳಿಕ ಘಟನೆ ಬೆಳಕಿಗೆ

Update: 2016-02-01 17:01 IST

ಕಾಸರಗೋಡು :  ಏಕಾಂಗಿಯಾಗಿ   ವಾಸವಾಗಿದ್ದ ವ್ಯಕ್ತಿಯೋರ್ವ ಮನೆಯಲ್ಲೇ ನಿಗೂಡವಾಗಿ ಮ್ರತಪಟ್ಟ ಘಟನೆ ಬದಿಯಡ್ಕ ಟಾಣಾ ವ್ಯಾಪ್ತಿಯಲ್ಲಿ   ನಡೆದಿದ್ದು ,ಮೂರು ದಿನ ಬಳಿಕವಷ್ಟೇ  ಘಟನೆ  ಬೆಳಕಿಗೆ ಬಂದಿದೆ.

ಪೆರ್ಲ ನಲ್ಕ ಕುರೆಡ್ಕದ   ಸತೀಶ ನಾಯ್ಕ ( ೩೫) ಮ್ರತಪಟ್ಟವರು.  ಒಡ್ಯ ಸಮೀಪದ  ಮಾಯಿಲಕ್ಕಾನ ದಲ್ಲಿರುವ  ಮನೆಯಲ್ಲಿ ಮ್ರತದೇಹ ಪತ್ತೆಯಾಗಿದೆ.  ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಬಂದು ಪರಿಶೀಲಿಸಿದಾಗ ಅಜೀರ್ಣಾವಸ್ಥೆಯಲ್ಲಿ ಮ್ರತದೇಹ ಪತ್ತೆಯಾಗಿದೆ.  ಮಾಯಿಲಕ್ಕಾನದಲ್ಲಿ ಸಣ್ಣ ಮನೆ ನಿರ್ಮಿಸಿ ಪತ್ನಿ  ಮಕಕ್ಕಳ ಜೊತೆ ವಾಸಿಸುತ್ತಿದ್ದರು. ದಿನನಿತ್ಯ ಸತೀಶ  ಪಾನಮತ್ತನಾಗಿ ಬರುತ್ತಿದ್ದು , ಇದರಿಂದ ಪತ್ನಿ , ಮಕ್ಕಳು ತಾಯಿ ಮನೆಗೆ ತೆರಳಿದ್ದರು ಎನ್ನಲಾಗಿದೆ . ಇದರಿಂದ ಏಕಾಂಗಿಯಾಗಿ ಸತೀಶ ಈ ಮನೆಯಲ್ಲಿ ವಾಸಿಸುತ್ತಿದ್ದರು, ಮೂರು  ದಿನಗಳ ಹಿಂದೆಯೇ ಮ್ರತಪಟ್ಟಿ ದ್ದಾರೆ  ಎನ್ನಲಾಗಿದೆ. ಮ್ರತದೆಹವನ್ನು  ತಜ್ಞ ಮರಣೋತ್ತರ ಪರೀಕ್ಷೆಗೆ  ಪರಿಯಾರಂ  ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.  ಸಾವಿಗೆ ಅತೀಯಾದ ಮದ್ಯ ಸೇವನೆ ಅಥವಾ ಇನ್ಯಾವುದೇ ಕಾರಣವಾಗಿರಬಹುದೇ ಎಂಬ ಬಗ್ಗೆ  ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸತೀಶ ಈ ಹಿಂದೆ  ನಲ್ಕ ದಲ್ಲಿ  ಹೊಟೇಲ್  ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News