ಕೋಣಾಜೆ : ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ನಡೆಸುತ್ತಿದ್ದ ಮೂವರ ಬಂಧನ, ಒಂದು ಕೆ.ಜಿ ಗಾಂಜಾ ವಶ
Update: 2016-02-01 18:08 IST
ಕೋಣಾಜೆ ಪೋಲೀಸ್ ಠಾಣಾ ವ್ಯಾಪ್ತಿಯ ಕೋಣಾಜೆ ಗ್ರಾಮದ ಪಟ್ಟೋರಿ ಎಂಬಲ್ಲಿ ಮೂವರು ವ್ಯಕ್ತಿಗಳು ಗಾಂಜಾ ಎಂಬ ಮಾಧಕ ವಸ್ತುವನ್ನು ವಿಧ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ, ರೋಶನ್ ನಿಕೇಶ್ ಮಿನೇಜಸ್ (24) ಸಿಂಪಲ್ ಕುಮಾರ್ (24) ಪ್ರಕಾಶ್ ಡಿ ಸೋಜಾ (23)ರವರನ್ನು ಕೋಣಾಜೆ ಪೋಲೀಸರು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆಯನ್ನು ಮುಂದುವರಿಸಲಾಗಿದೆ. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.