ಕಾಸರಗೋಡು; ಕನ್ನಡ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ
Update: 2016-02-01 18:18 IST
ಕಾಸರಗೋಡು : ಕೇರಳದಲ್ಲಿ ಆಡಳಿತ ಭಾಷೆಯಾಗಿ ಮಲಯಾಳಂ ಕಡ್ಡಾಯಗೊಳಿಸುವ ಹೊಸ ಮಸೂದೆಯಿಂದ ಕಾಸರಗೋಡು ಜಿಲ್ಲೆಯನ್ನು ಹೊರತುಪಡಿಸುವಂತೆ ಒತ್ತಾಯಿಸಿ ಕನ್ನಡ ಹೋರಾಟ ಕ್ರಿಯಾ ಸಮಿತಿ ವತಿಯಿಂದ ನಾಳೆ ( ೨) ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಿದೆ.
ಬೆಳಿಗ್ಗೆ ೯.೩೦ ಕ್ಕೆ ವಿದ್ಯಾನಗರದಲ್ಲಿರುವ ಸರಕಾರಿ ಕಾಲೇಜು ಪರಿಸರದಿಂದ ಬ್ರಹತ್ ಮೆರವಣಿಗೆ ಹೊರಡಲಿದ್ದು , ಬಳಿಕ ಧರಣಿ ನಡೆಯಲಿದೆ.
ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆಗಳು , ಅಧ್ಯಾಪಕರ ಸಂಘಟನೆ , ವಿದ್ಯಾರ್ಥಿಗಳು , ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.