×
Ad

ಮಂಗಳೂರು; ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರತಿನಿಧಿ ಸಭೆ

Update: 2016-02-01 18:48 IST

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಪ್ರತಿನಿಧಿ ಸಭೆಯು ಮಿತ್ತೂರಿನ, ಫ್ರೀಡಂ ಕಮ್ಯೂನಿಟಿ ಹಾಲ್‌ನಲ್ಲಿ ಜನವರಿ 30,31 ರಂದು ರಾಜ್ಯಾಧ್ಯಕ್ಷರಾದ ಮೊಹಮ್ಮದ್ ಸಾಕಿಬ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕಳೆದ ಒಂದು ವರ್ಷದ ವಾರ್ಷಿಕ ವರದಿಯನ್ನು ವಾಚಿಸಲಾಯಿತು. ಮತ್ತು ಪ್ರಸಕ್ತ ರಾಜ್ಯದ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಿ ಈ ಕೆಳಕಂಡ ನಿರ್ಣಯಗಳನ್ನು ಕೈಗೊಳ್ಳಲಾಯಿತು.

   1.ಮತಾಂತರದ ಆರೋಪದಲ್ಲಿ ಉತ್ತರ ಪ್ರದೇಶದ ಜಲಾಮ್ ಗ್ರಾಮದಲ್ಲಿ ವ್ಯಕ್ತಿಯೋರ್ವನನ್ನು ಬಜರಂಗದಳ ಕಾರ್ಯಕರ್ತರು ತಳೆಬೋಳಿಸಿ ಕತ್ತೆಯ ಮೇಲೆ ಮೆರವಣಿಗೆ ನಡೆಸಿರಿವ ಘಟನೆಯು ನಮ್ಮ ದೇಶದ ಕಾನೂನು ವ್ಯವಸ್ಥೆಗೆ ಒಡ್ಡಿದ ಸವಾಲಾಗಿದ್ದು ದೇಶದಲ್ಲಿ ಬೇರೂರಿರುವ ಅಸಹಿಷ್ಣುತೆಯ ಮುಂದುವರಿದ ಭಾಗವಾಗಿದೆ. ಆದುದರಿಂದ ಇಂತಹ ಕೃತ್ಯ ನಡೆಸುವ ಕೋಮುವಾದಿಗಳ ವಿರುದ್ಧ ಸರಕಾರ ಕಠಿಣ ಕ್ರಮಕೈಗೊಳ್ಳಬೇಕು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಫ್ಯಾಶಿಸ್ಟ್ ಶಕ್ತಿಗಳ ದುರಾಕ್ರಮಣದ ವಿರುದ್ಧ ಜಾತ್ಯತೀತ ಶಕ್ತಿಗಳು ಒಂದಾಗಿ ಹೋರಾಟ ನಡೆಸಬೇಕು.

 

      2.ಕರ್ನಾಟಕದ ಖ್ಯಾತ ಸಾಹಿತಿ ಮತ್ತು ಸಂಶೋಧಕರಾದ ಡಾ.ಎಂ.ಎಂ ಕಲಬುರ್ಗಿಯವರ ಹತ್ಯೆ ನಡೆದು ಹಲವು ತಿಂಗಳುಗಳು ಕಳೆದರೂ ಆರೋಪಿಗಳನ್ನು ಇನ್ನೂ ಪತ್ತೆ ಹಚ್ಚಲು ಸಾಧ್ಯವಾದೇ ಇರವುದು ಖಂಡನೀಯವಾಗಿದೆ. ಇದು ಸಾಹಿತಿಗಳ ಮತ್ತು ಸಮಾಜ ವಿರೋಧೀ ಹೋರಾಟಗಾರರಿಗೆ ಬೆದರಿಕೆಯಾಗಿದ್ದು ದುಷ್ಕರ್ಮಿಗಳಿಗೆ ಇಂತಹ ಕೃತ್ಯಗಳನ್ನು ಮುಂದುವರಿಸಲು ಪ್ರೇರಣೆಯಾಗಿದೆ. ಆದುದರಿಂದ ಎಂ.ಎಂ ಕಲಬುರ್ಗಿ ಹತ್ಯೆಯ ಬಗ್ಗೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿ ಆರೋಪಿಗಳನ್ನು ಶೀಘ್ರ ಪತ್ತೆ ಹ್ಚಬೇಕು.

     3.ಹೈದರಬಾದ್ ವಿವಿ ಯ ಸಮಶೋಧನಾ ವಿದ್ಯಾರ್ಥಿ ರೋಹಿತ್ ಮೇಮುಲ ವಿಶ್ವವಿದ್ಯಾನಿಲಯ ಆಡಳಿತದ ತಾರತಮ್ಯ ನೀತಿ, ಮಾನಸಿಕ ಕಿರುಕುಳ, ಶಿಷ್ಯ ವೇತನ ತಡೆ ಹಿಡಿದುದರಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆಯ ಬಳಿಕ ದೇಶಾದ್ಯಂತ ಪ್ರತಿಭಟನೆ ಕಾವೇರುತ್ತಿರುವ ಬೆನ್ನಲ್ಲೇ ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲೂಕು ಮಾದಾಪುರ ಬಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಲಿತ ವರ್ಗಕ್ಕೆ ಸೇರಿದ ಸುದೇಶ್ ಜನವರಿ 21 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತ ಪ್ರಾಂಶುಪಾಲರ ಪತ್ನಿ ಮತ್ತು ಮಕ್ಕಳು ಇದೊಂದು ಆಡಳಿತ ಮಂಡಳಿಯ ಕಿರುಕುಳ ತಾಳಲಾರದೇ ಮಾಡಿಕೊಂಡ ಆತ್ಮಹತ್ಯೆ ಎಂದು ಆರೋಪಿಸಿದ್ದಾರೆ. ಆಡಳಿತ ಮಂಡಳಿಯ ಕಿರುಕುಳ, ತಾರತಮ್ಯದಿಂದ ಮಾನಸಿಕವಾಗಿ ನೊಂದ ಪ್ರಾಂಶುಪಾಲರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಕೂಡ ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. 2001 ರಲ್ಲಿ ಉಪನ್ಯಾಸಕರಾಗಿ ಸೇರಿ 2010 ರಿಂದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುದೇಶ್‌ರ ಆತ್ಮಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು.

4.ಆರೆಸ್ಸೆಸ್ ಮುಸ್ಲಿಮ್ ರಾಷ್ಟ್ರೀಯ ಮಂಚ್‌ನ ಹೆಸರಿನಲ್ಲಿ ಮುಸ್ಲಿಮ್ ವೈಯುಕ್ತಿಕ ಕಾನೂನುಗಳನ್ನು ಬುಡಮೇಲುಗೊಳಿಸಲು ಪ್ರಯತ್ನಿಸುತ್ತಿದೆ. ಮುಸ್ಲಿಮ್ ರಾಷ್ಟ್ರೀಯ ಮಂಚ್‌ನ್ನು ಆರೆಸ್ಸೆಸ್ ರಾಷ್ಟ್ರೀಯ ಸಮಿತಿ ಸದಸ್ಯ ಮತ್ತು ಹಲವು ಬಾಂಬ್ ಸ್ಪೋಟದ ಆರೋಪಿಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ಎಂದು ತನಿಖಾಧಿಕಾರಿಗಳು ಅರೋಪಿಸಲ್ಪಟ್ಟ ಇಂದ್ರೇಶ್ ಕುಮಾರ್ ನಿಯಂತ್ರಿಸುತ್ತಿದ್ದು ಇದು ದೇಶದ ಮುಸ್ಲಿಮರ ಧಾರ್ಮಿಕತೆಯನ್ನು ನಾಶ ಮಾಡುವ ಷಡ್ಯಂತ್ರವಾಗಿದೆ. ಇದೀಗ ಮುಸ್ಲಿಂ ಮಂಚ್ ಕರ್ನಾಟಕದ ಹಲವು ಕಡೆಗಳಲ್ಲಿ ಕಾರ್ಯಕ್ರಮ ನಡೆಸಿ ಮುಸ್ಲಿಮರೊಳಗೆ ಭಿನ್ನತೆಗೆ ಶ್ರಮಿಸುತ್ತಿದ್ದು ಈ ಬಗ್ಗೆ ಮುಸ್ಲಿಂ ಸಂಘಟನೆಗಳು, ನಾಯಕರು ಮತ್ತು ಉಲಮಾಗಲು ಎಚ್ಚರದಿಂದಿರಬೇಕಾಗಿದೆ.

5.ಭಯೋತ್ಪಾದನಾ ಕೇಸುಗಳಲ್ಲಿ ಅಮಾಯಕರ ಬಂದನವಾಗುತ್ತಿರುವುದನ್ನು ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತನಿಖಾ ಸಂಸ್ಥೆಗಳು ರೂಪಿಸಿ ಅಂತಹ ಪ್ರಕರಣಗಳಲ್ಲಿ ಸ್ವತಂತ್ರ, ನ್ಯಾಯೋಚಿತ ಮತ್ತು ತ್ವರಿತ ವಿಚಾರಣೆಗಳ ಅಗತ್ಯವಿದೆ. ಮಾಧ್ಯಮಗಳ ಅತಿವೈಭವೀಕರಣದಿಂದಾಗಿ ವಿಚಾರಣಾ ಪ್ರಕ್ರಿಯೆಯಲ್ಲಿ ನ್ಯಾಯ ನೀಡಲು ಸಾಧ್ಯವಾಗುತ್ತಿಲ್ಲ. ಹಲವು ಶಂಕಿತ ಆರೋಪಿಗಳು ಹಲವಾರು ವರ್ಷಗಳಿಂದ ಜೈಲಿನಲ್ಲಿಕೊಳೆಯುತ್ತಿರುವುದಕ್ಕ ಈ ದೇಶವು ಸಾಕ್ಷಿಯಾಗಿದೆ. ಅಮಾಯಕ ಮುಸ್ಲಿಂ ಯುವಕರ ಜೀವನವು ಇದರಿಂದ ಹಾಳಾಗುತ್ತಿದ್ದು, ಅವರ ಅಮೂಲ್ಯ ಜೀವನವನ್ನು ಹಿಂದುರುಗಿಸಲು ಸಾಧ್ಯವಿಲ್ಲ. ಭಯೋತ್ಪಾಧನೆಯ ಹೆಸರಲ್ಲಿ ಅಮಾಯಕರನ್ನು ಗುರಿಪಡಿಸುವುದನ್ನು ತಡೆಯುವುದಕ್ಕಾಗಿ ಭದ್ರತಾ ಸಂಸ್ಥೆಗಳಲ್ಲಿನ ಸ್ವಹಿತಾಶಕ್ತಿ ಹೊಂದಿರುವಂತಹ ವ್ಯಕ್ತಿಗಳನ್ನು ತೆರವುಗೊಳಿಸಬೇಕು. ಮತ್ತು ಇಂತಹ ಘಟನೆಗಳಲ್ಲಿ ಮಾಧ್ಯಮಗಳು ಭಾವೋದ್ರೇಕಗೊಳಿಸುವಂತಹ ವರದಿಗಳನ್ನು ಬಿತ್ತರಿಸುವುದರಿಂದ ತಡೆದು ಭಯೋತ್ಪಾದನಾ ಕೇಸುಗಳಿಗೆ ಸಂಬಂಧಿಸಿ ಮುಕ್ತ ಹಾಗೂ ನ್ಯಾಯಯುತವಾದ ಶೀಘ್ರ ತನಿಖೆ ನಡೆಸಿ ತೀರ್ಪು ನೀಡಬೇಕೆಂದು ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸ್ಟೇಟ್ ಜನರಲ್ ಅಸ್ಸಂಬ್ಲಿಯು ಆಗ್ರಹಿಸುತ್ತದೆ.

    6.ಕರ್ನಾಟಕ ಸರ್ಕಾರ ಘೋಷಣೆ ಮಾಡಿದಂತೆ ರಾಜ್ಯದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾಯಿತಾದರೂ ಆ ಸಂಧರ್ಭದಲ್ಲಿ ಸಂಘಪರಿವಾರ ರಾಜ್ಯದ ವಿವಿಧ ಕಡೆಗಳಲ್ಲಿ ಟಿಪ್ಪು ಜಯಂತಿಯನ್ನು ವಿರೋಧಿಸುವುದಕ್ಕಾಗಿ ನಡೆಸಿದ ಗಲಭೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮಾಯಕರ ಮೇಲೆಯೂ ಕೇಸು ದಾಖಲಿಸಲಾಗಿದ್ದು ಅದನ್ನು ತಕ್ಷಣ ಸರಕಾರ ಹಿಂಪಡೆಯಬೇಕೆಂದು ಸ್ಟೇಟ್ ಜನರಲ್ ಅಸ್ಸಂಬ್ಲಿಯು ಆಗ್ರಹಿಸುತ್ತದೆ.

 

2 ದಿನಗಳ ರಾಜ್ಯ ಪ್ರತಿನಿಧಿ ಸಭೆಯು ಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಜಿನ್ನಾರವರ ಸಮಾರೋಪ ಭಾಷಣದೊಂದಿಗೆ ಕೊನೆಗೊಂಡಿತು. ವೇದಿಕೆಯಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯರಾದ ಅನೀಸ್ ಅಹ್ಮದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್, ಕಾರ್ಯದರ್ಶಿಗಳಾದ ಇಲ್ಯಾಸ್ ಬೆಂಗಳೂರು, ಕೋಶಾಧಿಕಾರಿ ಮೊಹ್ಸಿನ್ ಗುಲ್ಬರ್ಗಾ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಕಡೆಗಳ ಸುಮಾರು 200 ರಷ್ಟು ಪ್ರತಿನಿಧಿಗಳು ಭಾಗವಹಿಸಿದ್ದರು.

 

ಮುಹಮ್ಮದ್ ತಂಝೀಲ್

ಮಿಡಿಯಾ ಇನ್‌ಚಾರ್ಜ್ ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾ

ಕರ್ನಾಟಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News