ಮೂಡುಬಿದಿರೆ; "ಕಿರಿಕಿರಿ ಮಸ್ಕಿರಿ'’ ಕೃತಿ ಬಿಡುಗಡೆ
Update: 2016-02-01 20:49 IST
ಮೂಡುಬಿದಿರೆ : ಸಾಂಸಾರಿಕ ಜೀವನದಲ್ಲಿ ನಡೆಯುವಂತಹ ಘಟನೆಗಳನ್ನು ಹಾಸ್ಯರೂಪದಲ್ಲಿ ವರ್ಣಿಸಿ ರಚಿಸಿದಂತಹ ಪುಟ್ಟ ಹಾಸ್ಯ ಕಥಾ ಸಂಗ್ರಹ ’ಕಿರಿಕಿರಿ ಮಸ್ಕಿರಿ’ ಇತ್ತೀಚಿಗೆ ಅಲಂಗಾರು ಚರ್ಚ್‌ನಲ್ಲಿ ಬಿಡುಗಡೆಗೊಂಡಿತು. ಅಲಂಗಾರು ಚರ್ಚ್‌ನ ಧರ್ಮಗುರುಗಳಾದ ರೆ ಫಾ ಬೇಸಿಲ್ ವಾಸ್ ಇವರು ಕೃತಿಯನ್ನು ಅನಾವರಣಗೊಳಿಸಿದರು. ರೆ ಫಾ ಕೆನೆತ್ ಕ್ರಾಸ್ತಾ, ಸಾಹಿತಿ ಎಡ್ವರ್ಡ್ ಸೆರಾವೋ, ಜೆರಾಲ್ಡ್ ಲೋಬೋ ಉಪಸ್ಥಿತರಿದ್ದರು. ಕ್ರೈಸ್ತ ಸಮುದಾಯದಲ್ಲಿದ್ದು ತುಳು ಭಾಷೆಯಲ್ಲಿ ಬರೆದ ಪುಸ್ತಕವನ್ನು ತುಳು ಸಾಹಿತಿ ಹೆರಾಲ್ಡ್ ತಾವ್ರೋರವರು ರಚಿಸಿದ್ದಾರೆ. ಓದುಗರಿಂದ ಪ್ರಸಂಶೆಗೊಳಗಾದ ಈ ಪುಸ್ತಕವು ಹಾಸ್ಯಮಯವಾಗಿದ್ದು, ತುಳು ಸಾಹಿತ್ಯ ರಂಗಕ್ಕೆ ಲೇಖಕರ ವಿಶೇಷ ಕೊಡುಗೆಯಾಗಿದೆ.