ಸಶಸ್ತ್ರ ಸೀಮಾಬಲ್ ಮುಖ್ಯಸ್ಥೆಯಾಗಿ
ಅರ್ಚನಾ ರಾಮಸುಂದರಂ ಹೊಸದಿಲ್ಲಿ,ಫೆ.1: ಸಶಸ್ತ್ರ ಸೀಮಾಬಲ್(ಎಸ್‌ಎಸ್‌ಬಿ)ಯ ಮಹಾನಿರ್ದೇಶಕಿಯಾಗಿ ತಮಿಳುನಾಡು ಕೇಡರ್‌ನ ಐಪಿಎಸ್ ಅಧಿಕಾರಿಣಿ ಅರ್ಚನಾ ರಾಮಸುಂದರಂ ಸೋಮವಾರ ನೇಮಕಗೊಂಡಿದ್ದಾರೆ.ಅರ್ಚನಾ ಅವಪು ಅರೆಸೈನಿಕ ಪಡೆಗೆ ಮುಖ್ಯಸ್ಥೆಯಾಗಿ ನೇಮಕಗೊಂಡ ಪ್ರಪ್ರಥಮ ಮಹಿಳಾ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಪ್ರಸ್ತುತ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ನಿರ್ದೇಶಕಿಯಾಗಿರುವ ಅರ್ಚನಾ ಅವರನ್ನು ಸಶಸ್ತ್ರ ಸೀಮಾಬಲ್‌ನ ಮಹಾನಿರ್ದೇಶಕಿಯಾಗಿ ನೇಮಿಸಲಾಗಿದೆಯೆಂದು, ಸಂಪುಟದ ನೇಮಕಾತಿಗಳ ಸಮಿತಿಯು ಸೋಮವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ.
1980ರ ಸಾಲಿನ ಐಪಿಎಸ್ ಅಧಿಕಾರಿಣಿಯಾದ ಅರ್ಚನಾ ಅವರು 2017ರ ಆಗಸ್ಟ್‌ವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ನೇಪಾಳ ಹಾಗೂ ಭೂತಾನ್ ಗಡಿ ಪ್ರದೇಶಗಳಲ್ಲಿ ಸಶಸ್ತ್ರ ಸೀಮಾಬಲ್ ಪಡೆಯನ್ನು ನಿಯೋಜಿಸಲಾಗಿದೆ.
ಈ ಮಧ್ಯೆ ವಿಶೇಷ ರಕ್ಷಣಾ ತಂಡದ ಮಾಜಿ ವರಿಷ್ಠ ಕೆ. ದುರ್ಗಾಪ್ರಸಾದ್ ಅವರನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ನ ಮಹಾನಿರ್ದೇಶರಾಗಿ ನೇಮಿಸಲಾಗಿದೆ. ಗಡಿಭದ್ರತಾ ಪಡೆಯ ವರಿಷ್ಠರಾಗಿ 1982ರ ಸಾಲಿನ ರಾಜಸ್ತಾನ ಕೇಡರ್‌ನ ಐಪಿಎಸ್ ಅಧಿಕಾರಿ ಕೆ.ಕೆ. ಶರ್ಮಾ ನೇಮಕಗೊಂಡಿದ್ದಾರೆ.
ಈ ಹುದ್ದೆಗಳ ಹಾಲಿ ಮುಖ್ಯಸ್ಥರು ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಹೊಸ ನೇಮಕಾತಿಗಳು ನಡೆದಿರುವುದಾಗಿ ಸರಕಾರದ ಪ್ರಕಟನೆ ತಿಳಿಸಿದೆ.