×
Ad

ನಾಗರಿಕ ಸೇವಾ ಪರೀಕ್ಷೆಗೆೆ ವಯೋಮಿತಿ ಸಡಿಲಿಕೆ: ಸಾರ್ವಜನಿಕರ ಸಲಹೆ ಕೋರಿದ ಸಮಿತಿ

Update: 2016-02-01 23:32 IST

ಹೊಸದಿಲ್ಲಿ,ಫೆ.1: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಅಭ್ಯರ್ಥಿಗಳು, ನಾಗರಿಕ ಸೇವಾ ಪರೀಕ್ಷೆಗಳಿಗೆ ಬರೆಯಲು ಇರುವ ವಯೋಮಿತಿ ಹಾಗೂ ಅವರಿಗೆ ಪರೀಕ್ಷೆಗೆ ಬರೆಯಲು ಇರುವ ಗರಿಷ್ಠ ಪ್ರಯತ್ನಗಳ ಸಂಖ್ಯೆಯಲ್ಲಿ ವಿನಾಯಿತಿಯನ್ನು ಮುಂದುವರಿಸಬೇಕೇ?.

 ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಆಯ್ಕೆಗೆ ಇರುವ ಲೋಕಸೇವಾ ಆಯೋಗವು ನಡೆಸುವ ಪರೀಕ್ಷೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪರಿಶೀಲನೆಗಾಗಿ ನೇಮಿಸಲಾದ ತಜ್ಞರ ಸಮಿತಿಯು ಸಾರ್ವಜನಿಕರಿಂದ ಈ ಬಗ್ಗೆ ಅಭಿಪ್ರಾಯಗಳನ್ನು ಕೇಳಿದೆ. ನಾಗರಿಕ ಸೇವಾ ಪರೀಕ್ಷೆಯ ಪ್ರಸಕ್ತ ಸ್ವರೂಪವು, ನಗರ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರವಾಗಿದೆ ಹಾಗೂ ಇಂದಿನ ಸನ್ನಿವೇಶದಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ಇಂಗ್ಲಿಷ್ ಭಾಷಾ ಜ್ಞಾನ ಅಗತ್ಯ’ ಎಂಬುದರ ಬಗೆಗೂ ಸಮೀಕ್ಷೆಯು ಸಾರ್ವಜನಿಕರ ಅನಿಸಿಕೆಗಳನ್ನು ಸಂಗ್ರಹಿಸುತ್ತಿದೆ.
 

ಕಳೆದ ವರ್ಷ ಕೇಂದ್ರ ಸರಕಾರವು ನೇಮಿಸಿದ್ದ ಈ ಸಮಿತಿಗೆ ಮಾನವಸಂಪನ್ಮೂಲ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್.ಬಸ್ವಾನ್ ಅಧ್ಯಕ್ಷರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News