ಇಂದು ಕಾಸರಗೋಡಿನಲ್ಲಿ ಧರಣಿ
Update: 2016-02-01 23:54 IST
ಕಾಸರಗೋಡು, ಫೆ.1: ಕೇರಳದಲ್ಲಿ ಆಡಳಿತ ಭಾಷೆಯಾಗಿ ಮಲಯಾಳಂ ಕಡ್ಡಾಯಗೊಳಿಸುವ ಹೊಸ ಮಸೂದೆಯಿಂದ ಕಾಸರಗೋಡು ಜಿಲ್ಲೆಯನ್ನು ಹೊರತುಪಡಿಸುವಂತೆ ಒತ್ತಾಯಿಸಿ ಕನ್ನಡ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಫೆ.2ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಲಿದೆ. ಅದಕ್ಕೂ ಮುನ್ನ ಬೆಳಗ್ಗೆ 9:30ಕ್ಕೆ ವಿದ್ಯಾನಗರದಲ್ಲಿರುವ ಸರಕಾರಿ ಕಾಲೇಜು ಪರಿಸರದಿಂದ ಮೆರವಣಿಗೆ ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ.