ಸುರತ್ಕಲ್ ಎಸ್ ಎಸ್ ಎಫ್ ಡಿವಿಶನ್ ವತಿಯಿಂದ ಹಲವು ಕಾರ್ಯಕ್ರಮ
Update: 2016-02-03 11:50 IST
ಸುರತ್ಕಲ್, ಫೆ.3: ಸುರತ್ಕಲ್ ಎಸ್ ಎಸ್ ಎಫ್ ಡಿವಿಶನ್ ವತಿಯಿಂದ ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣೆ ಹಾಗೂ ರಾತೀಬ್ ಕಾರ್ಯಕ್ರಮ ಇತ್ತೀಚೆಗೆ ಕಾಟಿಪಳ್ಳ 4ನೇ ಬ್ಲಾಕ್ ನ ಬದ್ರಿಯಾ ಮದರಸದಲ್ಲಿ ನಡೆಯಿತು.
ಈ ವೇಳೆ ಮುಖ್ಯ ಪ್ರಭಾಷಣ ಗೈದ ಬಹುಮಾನ್ಯರಾದ ಉಮರುಲ್ ಫಾರೂಖ್ ಅಹ್ಸನಿ, ಅಲ್ಲಾಹನ ಆರಾದನೆಯಿಂದ ಮಾತ್ರ ಪ್ರೀತಿ, ವಿಶ್ವಾಸ, ಸ್ನೇಹಯುತ ಸಮಾಜ ಸ್ಥಾಪನೆ ಮತ್ತು ಮನಶಾಂತಿ ಲಭಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಸ್.ಎಫ್ ಸುರತ್ಕಲ್ ಡಿವಿಷನ್ ಅಧ್ಯಕ್ಷ ಹಬೀಬ್ ಸಖಾಫಿ ವಹಿಸಿದ್ದರು.
ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳ, ಮುಲ್ಕಿ ಸೆಕ್ಟರ್ ಗಳ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.