ಇಸ್ರೇಲ್ ನಿಂದ ಮನೆಗಳ ನೆಲೆಸಮ : ಬೀದಿ ಪಾಲಾದ ಫೆಲಸ್ತೀನಿಯರು
Update: 2016-02-03 13:34 IST
ಗಾಝಾಸಿಟಿ, ಫೆ.3:ಫೆಲಸ್ತೀ ನ್ ನ ಪಶ್ಚಿಮ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಇಸ್ರೇಲ್ ಸೈನಿಕರ ಬುಲ್ಡೋಸರ್ ಗಳು 23ಕ್ಕೂ ಅಧಿಕ ಮನೆಗಳನ್ನು ನೆಲಸಮಗೊಳಿಸಿದ್ದು, ನೂರಾರು ಮಂದಿ ಬೀದಿ ಪಾಲಾಗಿದ್ದಾರೆ.
300 ಸ್ಕ್ವಾರ‍್ ಕಿ.ಮೀ ವಿಸ್ತೀರ್ಣದ ಜಾಗವನ್ನು ವಿವಾದಾಸ್ಪದ ಮಿಲಿಟರಿ ವಲಯವನ್ನಾಗಿ 1970ರಲ್ಲಿ ಘೋಷಿಸಲಾಗಿತ್ತು., ಇಲ್ಲಿರುವ ಮನೆಗಳನ್ನು ನೆಲಸಮಗೊಳಿಸುವ ಕಾರ್ಯ ನಡೆಯುತ್ತಿದೆ. ಇಸ್ರೇಲ್ ಸೈನಿಕರು ಈ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡಿದ್ಧಾರೆ. ಎಂಟು ಗ್ರಾಮಗಳು ಒಳಗೊಂಡ ಈ ಪ್ರದೇಶವನ್ನು ಫೈಯರಿಂಗ್ ಝೋನ್ 918 ಎಂದು ಕರೆಯಲಾಗುತ್ತಿದೆ.
ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ಅತ್ಯಂತ ಹೆಚ್ಚು ನಾಗರಿಕರು ಮನೆಮಠ ಕಳೆದುಕೊಂಡಿದ್ಧಾರೆ. 110 ಮಂದಿ ಫೆಲಸ್ತೀನಿಯರು ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದಾರೆಂದು ಹೇಳಲಾಗಿದೆ.