ಅಮೆರಿಕವನ್ನು ಹಿಂದಿಕ್ಕಿದ ಭಾರತ ವಿಶ್ವದ ಎರಡನೆ ಅತಿ ದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆ
Update: 2016-02-03 15:35 IST
ಹೊಸದಿಲ್ಲಿ, ಫೆ.3: ಭಾರತವು ಸ್ಮಾರ್ಟ್‌ಫೋನ್ ಬಳಕೆಯಲ್ಲಿ ವಿಶ್ವದ ಎರಡನೆ ಅತಿ ದೊಡ್ಡ ಮಾರುಕಟ್ಟೆಯಾಗಿದ್ದು, ಅಮೆರಿಕವನ್ನು ಮೀರಿಸಿದೆ.
ಅಧ್ಯಯನ ವರದಿ ಪ್ರಕಾರ ಭಾರತದಲ್ಲಿ ಅತ್ಯಂತ ಹೆಚ್ಚು ಸ್ಮಾರ್ಟ್‌ಪೋನ್ ಬಳಕೆಯಾಗುತ್ತಿದ್ದು, ಸ್ಮಾರ್ಟ್‌ಫೋನ್‌ಗಳ ಬಳಕೆದಾರರ ಸಂಖ್ಯೆ 220 ಮಿಲಿಯನ್ ದಾಟಿದೆ.
ದೇಶದ ಜನಸಂಖ್ಯೆಯಲ್ಲಿ ಶೇ 30ರಷ್ಟು ಮಂದಿ ಮಾತ್ರ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಸ್ಯಾಮ್‌ಸಂಗ್ ಅತ್ಯಂತ ಹೆಚ್ಚು ಬಳಕೆಯಾಗುತ್ತಿದೆ. ಆನಂತರದ ಸ್ಥಾನವನ್ನು ಮೈಕ್ರೊಮ್ಯಾಕ್ಸ್ ಮತ್ತು ಲೆನೊವಾ ಪಡೆದಿದೆ.