ದ್ವಿಚಕ್ರ ವಾಹನ ಚಾಲಕರೇ, ಹೆಲ್ಮೆಟ್ಟಿಲ್ಲವೋ ನಿಮಗೆ ಇಲ್ಲಿ ಪೆಟ್ರೋಲೇ ಇಲ್ಲ!
Update: 2016-02-03 15:48 IST
ಭೊಫಾಲ: ಮಧ್ಯಪ್ರದೇಶ ಸರಕಾರ ಹೆಲ್ಮೆಟ್ ಧರಿಸಲಿಕ್ಕಾಗಿ ದ್ವಿಚಕ್ರವಾಹನ ಚಾಲಕರ ಮೇಲೆ ವಿನೂತನ ಪ್ರಯೋಗ ನಡೆಸಿದೆ. ಹೆಲ್ಮೆಟ್ ಧರಿಸಿ ಬಂದರೆ ಮಾತ್ರ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ನೀಡಬೇಕೆಂದು ಅಲ್ಲಿ ಆದೇಶ ಹೊರಡಿಸಲಾಗಿದೆ. ಅಲ್ಲಿನಅಧಿಕಾರಿಗಳ ಪ್ರಕಾರ ಆಹಾರ, ನಾಗರಿಕ ಸರಬರಾಜು ಸಚಿವಾಲಯ ಜಿಲ್ಲಾಧಿಕಾರಿಗಳಿಗೆ ಈ ಸೂಚನೆಯನ್ನು ಹೊರಡಿಸಿದೆ.
ಯಾವುದೇ ಪೆಟ್ರೋಲ್ ಪಂಪ್‌ಗಳು ಈ ನಿಯಮವನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಆವಶ್ಯಕವಸ್ತು ಅಧಿನಿಯಮ-1955ಕಲಂ ಪ್ರಕಾರ ಕ್ರಮ ಜರಗಿಸಬೇಕೆಂದು ಸಚಿವಾಲಯ ಆದೇಶ ನೀಡಿದೆ. ಈ ಮೊದಲೇ ಸರಕಾರ ಇಂತಹ ಆದೇಶ ಜಾರಿಗೊಳಿಸಿತ್ತು. ಇದರ ವಿರುದ್ಧ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೆಲವರು ಸಲ್ಲಿಸಿದ್ದರು. ಇಂದೋರ್‌ನ ಉಚ್ಚ ನ್ಯಾಯಾಲಯದ ಖಂಡಪೀಠ ಈಗ ಈ ಅರ್ಜಿಗಳನ್ನು ವಜಾಗೊಳಿಸಿದೆ.